ಒಂದು ಚಿತ್ರ ತೆರೆಗೆ ಬಂದರೆ ಅದರ ಹಿಂದೆಯೇ ಎರಡನೇ ಬಾಗದ ಅವರತರಿಣಿಕೆ ಹೊರತರುವುದು ಸಾಮಾನ್ಯ. ಈಗಾಗಲೇ ಮಸ್ತ್ ಮಜಾ ಮಾಡಿ ಭಾಗ-2 ಪ್ರಾರಂಭವಾಗುವ ಸನ್ನದ್ಧದಲ್ಲಿದ್ದರೆ, ಪ್ರೇಮ್ ನಿರ್ದೇಶನದ ಜೋಗಿ-2 ಪ್ರಾರಂಭಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಅಂದು ಫ್ರೆಂಡ್ಸ್ ಚಿತ್ರ ಮಾಡಿದಾಗ ಇದೇ ರೀತಿ ಹೇಳಿದ್ದವರು ನಿರ್ದೇಶಕ ಎಬಿಸಿಡಿ ಶಾಂತಕುಮಾರ್.
ಇವರ ನಿರ್ದೇಶನದ ಪ್ರೆಂಡ್ಸ್ ಚಿತ್ರದ ಯಶಸ್ಸಿನ ಬಳಿಕ ಅದರ ಎರಡನೇ ಆವತರಣಿಕೆಯನ್ನು ತರವುದಾಗಿ ಘೋಷಿಸಿದ್ದರು. ಶರಣ್, ಆನಂದ್ ಸೇರಿದಂತೆ ಅದೇ ಚಿತ್ರದ ಹಳೇ ತಂಡವೇ ಇರುತ್ತದೆ. ಬ್ಯಾಂಕಾಕ್ನಲ್ಲಿ ಶೂಟಿಂಗ್ ಮಾಡಲಾಗುತ್ತೆ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಇದೀಗ ಹೀಗೆ ಹೇಳುತ್ತಾ ಎರಡು ಮಳೆಗಾಲ ಕಳೆಯಿತು. ಪ್ರೆಂಡ್ಸ್ ಬಿಟ್ಟು ಇದೀಗ ದೇವದಾಸರಾಗಿದ್ದಾರೆ ಶಾಂತಕುಮಾರ್.
ಹಾಗಾದರೆ ಇದಕ್ಕೆ ಕಾರಣ ಎನು ಎಂದು ಕೇಳಿದರೆ, ನಾನೇನ್ ಮಾಡ್ಲಿ. ಸಿನಿಮಾ ಮುಗ್ಸೋಕೆ ಶರಣ್ ಹಾಗೂ ಆನಂದ್ ಡೇಟ್ಸ್ ಸಿಕ್ತಾ ಇಲ್ಲ. ನಂಗೂ ಕರೆದೂ ಕರೆದೂ ಸಾಕಾಯ್ತು. ಒಟ್ಟಿಗೆ 20 ದಿನ ಕಾಲ್ಶೀಟ್ ಕೊಟ್ರೆ ಗ್ಯಾರಂಟಿ ಶೂಟಿಂಗ್ ಮುಗಿಸ್ತೀನಿ ಎಂದು ಪುರಾಣ ಬಿಚ್ಚಿದರು ಶಾಂತಕುಮಾರ್. ಅದಕ್ಕಾಗಿ ಆ ಪ್ರಾಜೆಕ್ಟ್ ಬದಿಗಿಟ್ಟು ದೇವದಾಸ ಎತ್ತುಕೊಂಡಿದ್ದಾರೆ. ಚಿತ್ರಕ್ಕೆ ಯೋಗೀಶ್ ನಾಯಕ. ನಾಯಕಿಯಾಗಿ ಬಾಲಿವುಡ್ನ ಜೆನಾಲ್ ಪ್ಯಾಂಡಿ ಕಾಣಿಸಿಕೊಳ್ಳುತ್ತಿದ್ದಾರೆ.