ಚಾಲೆಂಜಿಂಗ್ ಸ್ಟಾರ್ ನಿಜವಾಗಿಯೂ ರಿಯಲ್ ಸ್ಟಾರ್ ಆಗಿದ್ದಾರೆ. ದರ್ಶನ್ ದುಡ್ಡಿಗಾಗಿ ಎಂಥ ಪಾತ್ರಕ್ಕೂ ಸೈ ಎನ್ನುತ್ತಾರೆ ಎಂದು ನಿರ್ಮಾಪಕರೇ ಹೇಳುತ್ತಿರುವಾಗ ಇದೇನಪ್ಪ ಎಂದು ನಿಮಗೆ ಆಶ್ಚರ್ಯವಾಗಬಹುದು.
ತೆಲುಗಿನ ಪೋಕ್ರಿ ಚಿತ್ರದ ರೀಮೇಕ್ ಆಗಿರುವ ಪೋರ್ಕಿಯಲ್ಲಿ ಫೈಟ್‌ಗಳೇ ಪ್ರಧಾನ. ಫೈಟ್ ದೃಶ್ಯಗಳಿಗೆ ಸಾಮಾನ್ಯವಾಗಿ ಡ್ಯೂಪ್ ಬಳಸುತ್ತಾರೆ. ದರ್ಶನ್ ಡ್ಯೂಪ್‌ನ ಸಹಾಯವಿಲ್ಲದೆ ನಾನೇ ಜಿಗಿಯುತ್ತೇನೆ ಎಂದು ಮಾಡಿ ಮುಗಿಸಿದರು. ಆದರೆ ಡ್ಯೂಪ್ ಮಾಡುವುದಕ್ಕಾಗಿ ಮೂವರು ತಲಾ 5 ಸಾವಿರ ಪಡೆಯುತ್ತಾರೆ ನನ್ನಿಂದ ಆ ಜನಕ್ಕೆ ಹದಿನೈದು ಸಾವಿರ ನಷ್ಟವೇ ಎಂದು ನಿರ್ಮಾಪಕರಿಗೆ ಹೇಳಿ ಆ ಮೊತ್ತವನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಷ್ಟೇ ಅಲ್ಲ, ಕ್ಯಾನ್ಸರ್ ಪೀಡಿತ ನಾಲ್ಕು ಜನ ಮಕ್ಕಳು ದರ್ಶನ್ ಅವರನ್ನು ಭೇಟಿ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದ್ದರಂತೆ. ಆದರೆ ದರ್ಶನ್‌ಗೆ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಎರಡನೇ ಬಾರಿ ಭೇಟಿ ಮಾಡುವ ಹೊತ್ತಿಗೆ ಎರಡು ಮಕ್ಕಳು ಸತ್ತು ಹೋಗಿದ್ದರು. ಉಳಿದಿಬ್ಬರ ಜೊತೆ ಅರ್ಧ ದಿನ ಕಳೆದ ದರ್ಶನ್‌ಗೆ ಮಾರನೇ ದಿನ ಅವರಿಬ್ಬರೂ ಮಕ್ಕಳು ಸತ್ತು ಹೋದರು ಎಂದು ತಿಳಿಯಿತಂತೆ. ಕೂಡಲೇ ಮನೆಗೆ ತೆರಳಿದ ದರ್ಶನ್ ಅವರ ನೆನಪಿಗಾಗಿ ಆ ಮಕ್ಕಳು ತೊಡುತ್ತಿದ್ದ ಸ್ವೆಟರ್ ಮತ್ತು ಟೋಪಿಯನ್ನು ಮನೆಗೆ ತಂದರಂತೆ. ಇವೆಲ್ಲಾ ಪ್ರಚಾರವಾಗಬಾರದು ಎಂದು ಬಯಸುವ ದರ್ಶನ್ ವ್ಯಕ್ತಿತ್ವ ಮೆಚ್ಚಲೇಬೇಕು.