ಬಹಳ ಕಾಲದ ನಂತರ ರಮೇಶ್ ಅರವಿಂದ್ ಹಾಗೂ ಅನಂತನಾಗ್ ಒಂದಾಗುತ್ತಿದ್ದಾರೆ. ಹೌದು. ಅನಂತನಾಗ್ ಹಾಗೂ ರಮೇಶ್ ಒಟ್ಟಾಗಿ ಒಂದೇ ತೆರೆಯಲ್ಲಿ ಬಂದಿದ್ದು ಕಡಿಮೆಯೇ. ಅವೇನಿದ್ದರೂ ಬೆರಳೆಣಿಕೆ ಮಾತ್ರ. ಮನೆಯೇ ಮಂತ್ರಾಲಯ, ಶಾಂತಿ ಕ್ರಾಂತಿ ಮುಂತಾದ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ ಈ ಜೋಡಿ ಈಗ ಮತ್ತೆ ಒಂದಾಗುವ ಕಾಲ ಬಂದಿದೆ. ಚಿತ್ರದ ಹೆಸರು ಕ್ರೇಜಿ ಕುಟುಂಬ.
PR
ಕಳೆದ ವರ್ಷದ ಸೂಪರ್ ಹಿಟ್ ಮರಾಠಿ ಚಿತ್ರ ದೇ ಧಕ್ಕಾ ಕ್ರೇಜಿ ಕುಟುಂಬಕ್ಕೆ ಸ್ಪೂರ್ತಿಯಂತೆ. ಅಂದಹಾಗೆ, ರಮೇಶ್ ಅಭಿನಯದ ಹೇ ಸರಸು ಚಿತ್ರ ಇದೀಗ ತೆರೆಗೆ ಬರಲು ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸಿದೆಯಂತೆ. ಹೇ ಸರಸೂವಿನ ರಾಮಮೂರ್ತಿ ಜತೆಗೆ ಮತ್ತೆ ಕೈಜೋಡಿಸಿರುವ ರಮೇಶ್ ಈಗ ಕ್ರೇಜಿ ಕುಟುಂಬ ಕಟ್ಟುತ್ತಿದ್ದಾರೆ.
ಈ ಚಿತ್ರವನ್ನು ರಮೇಶ್ ಅವರ ಸಂಬಂಧಿ ರವಿ ಜೋಷಿ ನಿರ್ಮಿಸುತ್ತಿದ್ದಾರೆ. ರಿಕ್ಕಿ ಕೇಜ್ ಸಂಗೀತವಿರಲಿದೆ. ನಾಯಕಿಯ ತಲಾಶ್ ಆರಂಭವಾಗಿದೆ.