ನಟ ಕಿಶೋರ್ ನಟಿಸಿದ್ದ ವೆನಿಲ್ಲಾ ಕಬಡ್ಡಿ ಕುಳಂ ಹಿಟ್ ತಮಿಳು ಚಿತ್ರವೀಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಆ ಮೂಲಕ ತೆಲುಗಿನಲ್ಲೂ ಸುದ್ದಿ ಮಾಡಿದ್ದಾರೆ.
ಈಗಾಗಲೇ ಪೆರೋಲ್ ಮತ್ತು ಕಳ್ಳರ ಸಂತೆ ಚಿತ್ರಗಳಲ್ಲಿ ತಮ್ಮ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಮತ್ತೆರಡು ಕನ್ನಡ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಕಿಶೋರ್. ಆದರೆ ಡೇಟ್ಸ್ ಹೊಂದಿಸಿಕೊಂಡು ಸಹಿ ಹಾಕುತ್ತಾರಂತೆ.
ಈ ನಡುವೆ ಇವರು ಪೂರ್ಣ ಪ್ರಮಾಣದ ನಾಯಕನಾಗಿರುವ ತಮಿಳು ಚಿತ್ರ ಪೋರ್ಕಳಂ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಅದು ಅವರ ಸಿನಿಮಾ ಭವಿಷ್ಯಕ್ಕೊಂದು ಮುನ್ನುಡಿಯಾಗಲಿದೆ ಎಂಬುದು ಅವರ ಅಭಿಪ್ರಾಯ. ಇದರ ಜೊತೆಗೆ ಬಾಲಿವುಡ್ಡಿಗೂ ಹೆಜ್ಜೆ ಇರಿಸಿರುವ ಕಿಶೋರ್ ಈಗಾಗಲೇ ಸೈತಾನ್ ಎಂಬ ಚಿತ್ರದಲ್ಲಿ ನಟಿಸಲು ಅಣಿಯಾಗುತ್ತಿದ್ದಾರೆ. ಚಿತ್ರವು ಅಕ್ಟೋಬರ್ನಲ್ಲಿ ಪ್ರಾರಂಭವಾಗಲಿದೆಯತೆ. ಕಿಶೋರ್ಗೆ ಶುಭವಾಗಲಿ.