ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನೆನಪಿರಲಿ ಪ್ರೇಮ್‌ಗೆ ಸಂಜನಾ ಜೋಡಿ (Prem | Sanjana | Nenapirali | Guruprasad)
ಸುದ್ದಿ/ಗಾಸಿಪ್
Feedback Print Bookmark and Share
 
Prem
MOKSHA
ನಟ ಪ್ರೇಮ್‌ಗೆ ಹೊಸ ಆಫರ್ ಬಂದಿದೆ. ನೆನಪಿರಲಿ ಚಿತ್ರದ ಬಳಿಕ ಹಲವು ಪ್ಲಾಪ್ ಚಿತ್ರಗಳನ್ನು ನೀಡಿದ್ದ ಪ್ರೇಮ್ ಕತೆ ಮುಗಿಯಿತು ಎಂದು ಗಾಂಧಿನಗರ ಹೇಳಿಕೊಳ್ಳುತ್ತಿರುವಾಗಲೇ ಈಗ ಮತ್ತೆ ಪ್ರೇಮ್ ಎದ್ದು ಬರುತ್ತಿದ್ದಾರೆ.

ಪ್ರೇಮ್ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಒಂದಾದ ಮೇಲೊಂದರಂತೆ ನೆಲಕಚ್ಚಿದ ಮೇಲಂತೂ ನಿರ್ಮಾಪಕರು ದೂರವಾದರು. ಭರವಸೆ ಮೂಡಿಸಿದ್ದ ಗೌತಮ್ ಚಿತ್ರ ಕೂಡ ಸೋತ ಬಳಿಕವಂತೂ ನಿರ್ಮಾಪಕರು ಪ್ರೇಮ್ ಬಗ್ಗೆ ನಿರೀಕ್ಷೆ ಕಡಿದುಕೊಂಡರು. ಅತ್ತ ಜೊತೆಗಾರದಲ್ಲಿ ನಿರ್ಮಾಪಕ ಅಶ್ವಿನಿ ರಾಂ ಪ್ರಸಾದ್ ಜೊತೆ ಸ್ನೇಹ ಕಳೆದುಕೊಂಡರು. ಇನ್ನು ರಮೇಶ್ ಯಾದವ್ ನಿರ್ಮಾಣದ ಜನುಜನುಮದಲ್ಲೂ ಚಿತ್ರ ಸೆಟ್ಟೇರಿದ್ದು, ಗೊತ್ತಾಗಿದೆಯೇ ಹೊರತು, ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
Sanjana
MOKSHA


ಅದೇನೇ ಇರಲಿ, ಇದೀಗ ರಾಮ್ ಗೋಪಾಲ್ ವರ್ಮಾ ಗರಡಿಯಲ್ಲಿ ಪಳಗಿರುವ ರವೀಂದ್ರ ನಿರ್ದೇಶನದ ಚಿತ್ರವೊಂದರಲ್ಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗುತ್ತದೆ ಎಂಬ ಭರವಸೆಯಲ್ಲಿರುವ ಪ್ರೇಮ್, ಈ ಚಿತ್ರ ನನಗೆ ಮೊದಲಿದ್ದ ಲವರ್ ಬಾಯ್ ಇಮೇಜ್ ಪಾತ್ರವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಚಿತ್ರದಲ್ಲಿ ನಾಯಕಿಯಾಗಿ ಗಂಡಹೆಂಡತಿ ಖ್ಯಾತಿಯ ಸಂಜನಾ ಅಭಿನಯಿಸುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಚಿತ್ರಕ್ಕೆ ಕಥೆ, ಸಂಭಾಷಣೆ ಮತ್ತು ಗೀತ ರಚನೆಯನ್ನು 'ಎದ್ದೇಳು ಮಂಜುನಾಥ' ಖ್ಯಾತಿಯ ಗುರುಪ್ರಸಾದ್ ಮಾಡುತ್ತಿದ್ದಾರೆ. ಅದಕ್ಕಾಗಿ ಇದುವರೆಗೂ ಯಾರೂ ಪಡೆಯದ ಸಂಭಾವನೆಯನ್ನೂ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಎಷ್ಟಿರಬಹುದು?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮ್, ನೆನಪಿರಲಿ, ಸಂಜನಾ, ಗುರುಪ್ರಸಾದ್