ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಣ್ಣಂಗೆ ಬೇಜಾರಾಗಿದೆ ಅಂತ ಗೊತ್ತು: ಕೋಮಲ್ (Guruprasad | Jaggesh | Komal | Eddelu Manjunatha)
ಸುದ್ದಿ/ಗಾಸಿಪ್
Feedback Print Bookmark and Share
 
Komal
MOKSHA
ಗುರುಪ್ರಸಾದ್ ನಿರ್ದೇಶನದಲ್ಲಿ ಕೋಮಲ್ ನಟಿಸುತ್ತಿರುವುದರಿಂದ ಜಗ್ಗೇಶ್‌ ಮುಖಕ್ಕೆ ಹೊಡೆದ ಹಾಗಾಗಿದೆಯೋ ಹೇಗೆ? ಗೊತ್ತಿಲ್ಲ. ಆದರೆ ಕೋಮಲ್ ಅವರೇ ಹೇಳುವಂತೆ, ಗುರುಪ್ರಸಾದ್ ಸಿನಿಮಾಕ್ಕೆ ನಾನು ಒಕೆ ಅಂದಿದ್ದು ಅಣ್ಣಂಗೆ ಬೇಸರವಾಗಿದೆ ಅಂತ ಗೊತ್ತಿದೆ. ಆದರೆ ನಾನೇನು ಮಾಡ್ಲಿ. ನಾನು ಒಪ್ಪಿಕೊಳ್ಳದಿದ್ದರೆ, ಈ ಅವಕಾಶ ಬೇರೆಯವರ ಪಾಲಾಗುತ್ತೆ ಅಂತ ನಾನೇ ಒಪ್ಪಿಕೊಂಡೆ ಅಂತ ಹೇಳುತ್ತಾರೆ.

ನನ್ನ ಹತ್ತಿರ ಸೂರಿ, ಯೋಗರಾಜ ಭಟ್ಟರಂತಹ ನಿರ್ದೇಶಕರು ಬರಲ್ಲ. ನನಗೆ ಯಾರೂ ಗಾಡ್‌ಫಾದರ್‌ಗಳಿಲ್ಲ. ಹೀಗಿರುವಾಗ ನಾನು ನನ್ನ ದಾರಿ ನೋಡಿಕೊಳ್ಳಬೇಕು. ಬೆಳೆಯಬೇಕು. ಹೆಸರು ಪಡೆಯಬೇಕು ಎನ್ನುತ್ತಾರೆ ಕೋಮಲವಾಗಿ ಕೋಮಲ್.

ಗುರುಪ್ರಸಾದ್ ನೀಡಿದ ಆಹ್ವಾನವನ್ನು ಒಂದು ಚಿತ್ರದ ದೃಷ್ಟಿಯಲ್ಲಿ ನೋಡಿದ್ದೇನೆ. ವೈಯಕ್ತಿಕ ನೆಲೆಯಲ್ಲಿ ಎಂದಿಗೂ ನೋಡಿಲ್ಲ. ನಮ್ಮಣ್ಣನಿಗೆ ಗುರು ಅವರಿಂದ ಏನೋ ತೊಂದರೆಯಾಗಿದೆ, ಹಾಗಾಗಿ ಗುರು ಚಿತ್ರದಲ್ಲಿ ನಾನೂ ನಟಿಸಲ್ಲ ಅಂದರೆ ಆಗಲ್ಲ. ಇದರಿಂದ ಅಣ್ಣ ಜಗ್ಗೇಶ್‌ಗೆ ಸ್ವಲ್ಪ ಬೇಸರವಾಗಿದೆ ಅಂತ ನನಗೆ ಅರ್ಥವಾಗಿದೆ. ಆದರೆ ನಾನು ಆಮೇಲೆ ಅಣ್ಣನ ಬಳಿ ಮಾತಾಡಿದ್ದೇನೆ. ಅಣ್ಣ ಹಾಗೆಲ್ಲಾ ವಿಶೇಷವಾಗಿ ತಲೆ ಕೆಡಿಸಿಕೊಳ್ಳಲ್ಲ ಬಿಡಿ ಎನ್ನುತ್ತಾರೆ ಕೋಮಲ್.

ಎದ್ದೇಳು ಮಂಜುನಾಥ ಚಿತ್ರದ ನಂತರ ಬೇರೆಬೇರೆಯಾದ ಜೋಡಿ ಗುರುಪ್ರಸಾದ್ ಹಾಗೂ ಜಗ್ಗೇಶ್. ಜಗ್ಗೇಶ್ ಕೈಕೊಟ್ಟರೇನಂತೆ ತಮ್ಮ ಕೋಮಲ್ ಇಲ್ವಾ ಎಂದು ಗುರು ಕೋಮಲ್ ಕೈಯ್ನು ಕೋಮಲವಾಗಿಯೇ ಹಿಡಿದಿದ್ದಾರೆ. ಗುರು ಅವರ ಹೆಸರಿಡದ ಮುಂದಿನ ಚಿತ್ರದ ನಾಯಕ ಕೋಮಲ್. ಅತ್ತ ಜಗ್ಗೇಶ್ ಕೂಡಾ ನಾನೇ ಚಿತ್ರ ನಿರ್ದೇಶಿಸುತ್ತೇನೆ ಅಂತ ಹೊರಟಿರುವ ಸುದ್ದಿಯೂ ಇದೆ ಬಿಡಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗುರುಪ್ರಸಾದ್, ಜಗ್ಗೇಶ್, ಕೋಮಲ್, ಎದ್ದೇಳು ಮಂಜುನಾಥ