ಒಂದು ಮುಹೂರ್ತದ ಕರೆಯೋಲೆಗೆ ಅಬ್ಬಬ್ಬಾ ಎಂದರೆ ಎಷ್ಟು ಖರ್ಚು ಮಾಡಬಹುದು? 50 ಸಾವಿರದಿಂದ 1 ಲಕ್ಷ ಎನ್ನಬಹುದು. ಆದರೆ ಇತ್ತೀಚೆಗೆ ನಡೆದ ಎಕೆ 56 ಕರೆಯೋಲೆಗೆ ಆಗಿರುವ ಖರ್ಚು ಬರೋಬ್ಬರಿ ಹತ್ತು ಲಕ್ಷ ರೂ.ಗಳು.
ಇದು ಓಂ ಪ್ರಕಾಶ್ ಅವರ 25ನೇ ಚಿತ್ರ. ಇದು ಏಳು ಕೋಟಿ ರೂಗಳ ಚಿತ್ರವಾಗಿದೆ. ಬರೀ ಕರೆಯೋಲೆಗಾಗಿಯೇ ಹತ್ತು ಲಕ್ಷ ಖರ್ಚು ಮಾಡಿರುವುದು ಚಿತ್ರರಂಗದ ಹುಬ್ಬೇರಿಸಿದೆ. ಇದನ್ನು ಆಮಂತ್ರಣ ಪತ್ರ ಅನ್ನುವುದಕ್ಕಿಂತ ಒಂದು ಪುಸ್ತಕವೇ ಅನ್ನಬಹುದೇನೋ. 28 ಪುಟಗಳನ್ನು ಒಳಗೊಂಡಿರುವ ಈ ಕರೆಯೋಲೆಯಲ್ಲಿ ಪ್ರತಿಯೊಂದರ ಬೆಲೆ 600 ರೂ.ಗಳು! ಇಂತಹ 1500ಕ್ಕೂ ಹೆಚ್ಚು ಕರೆಯೋಲೆ ಮುದ್ರಿಸಿ ಇಡೀ ಕನ್ನಡ ಉದ್ಯಮಕ್ಕೆ ಹಂಚಿದ್ದಾರೆ. ಇದರ ಹಿಂದೆ ಪ್ರತಿಭಾನ್ವಿತ ಡಿಸೈನರ್ ಮಣಿ ಅವರ ಪ್ರಯತ್ನವಿದೆ. ಇದು ಅವರ 200ನೇ ಚಿತ್ರವೂ ಹೌದು. ಎನ್. ಓಂಪ್ರಕಾಶ್ ರಾವ್ ಬಳಿ ಮಣಿ ದುಡಿಯುತ್ತಿರುವುದು ಇದೇ ಮೊದಲು.
ಬರೀ ಕರೆಯೋಲೆ ಮಾತ್ರವಲ್ಲ. ಒಂದು ಸಾಹಸ ಸನ್ನಿವೇಶ ಹಾಗೂ ಛೇಸ್ ದೃಶ್ಯಕ್ಕೆ ಒಂದು ಕೋಟಿ ರೂ. ಖರ್ಚು ಮಾಡಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಇನ್ನು ಏನೆಲ್ಲಾ ಸುದ್ದಿಗಳು ಬರಲಿವೆಯೋ ಕಾದು ನೋಡಬೇಕು.