ಪ್ರಜ್ವಲ್ ದೇವರಾಜ್ ಅಭಿನಯದ ಜೀವಾ ಚಿತ್ರ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ. ಯಾವುದನ್ನೂ ತುರಾತುರಿಯಲ್ಲಿ ಮಾಡಿಲ್ಲ. ತಂತ್ರಜ್ಞರು ಕೇಳಿದಷ್ಟು ಸಮಯವನ್ನು ಕೊಟ್ಟಿದ್ದೇವೆ ಎಂಬುದು ತಡವಾಗಿದ್ದಕ್ಕೆ ಚಿತ್ರತಂಡದ ಕಾರಣ.
ಚಿತ್ರವನ್ನು ಪ್ರಭು ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಚಿತ್ರ ಒಂದು ಹೊಸ ಮೈಲಿಗಲ್ಲಾಗುವ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅವರು. ಚಿತ್ರದಲ್ಲಿ ಭಿನ್ನವಾದ ಮೇಕಿಂಗ್ ಇದೆ. ಪ್ರತಿ ಫ್ರೇಮ್ನಲ್ಲೂ ಹೊಸತನ ಕಾಣಬಹುದು ಎಂದು ಚಿತ್ರದ ವಿಶೇಷತೆಯ ಬಗ್ಗೆ ಹೇಳುತ್ತಾರೆ ಪ್ರಭು ಶ್ರೀನಿವಾಸ್.
ನಾಯಕ ಪ್ರಜ್ವಲ್ ದೇವರಾಜ್ ಪಾಲಿಗೆ ಜೀವಾ ಚಿತ್ರ ನಿಜಕ್ಕೂ ಅವರ ಮುಂದಿನ ಜೀವನದ ಪ್ರಶ್ನೆ. ಬಹಳ ಕಾತುರದಿಂದ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ನನ್ನ ಈ ಹಿಂದಿನ ಚಿತ್ರಗಳಿಗಿಂತ ಇದೊಂದು ವಿಭಿನ್ನ ಚಿತ್ರವಾಗುತ್ತದೆಂಬ ವಿಶ್ವಾಸವಿದೆ ಎಂಬುದು ಅವರ ಭರವಸೆ. ನಾಯಕಿಯಾಗಿ ಋತುವಾ ಅಭಿನಯಿಸುತ್ತಿದ್ದಾರೆ. ಈಕೆಗೆ ಇಲ್ಲಿ ಪಕ್ಕಾ ಹೋಮ್ಲಿ ಹುಡುಗಿಯ ಪಾತ್ರ. ತಮ್ಮ ಪಾತ್ರ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗುತ್ತದೆಂಬ ವಿಶ್ವಾಸ ಅವರದ್ದು. ಇದೆಲ್ಲವುದನ್ನು ನೋಡಬೇಕಾದರೆ ಅಕ್ಟೋಬರ್ವರೆಗೆ ಕಾಯಬೇಕು.