ರಮ್ಯಾ ರಂಪಾಟಕ್ಕೆ ಕೊನೆ ಹಾಡಿದ್ದಾಗಿದೆ. ಅತ್ತ ನೃತ್ಯ ಕಲಾವಿದರೂ ಬಹಿಷ್ಕಾರವನ್ನು ವಾಪಸ್ ಪಡೆದಿದ್ದಾರೆ. ಆದರೂ, ಶೂಟಿಂಗ್ ಸ್ಥಳದಲ್ಲಿ ನಡೆದಿದ್ದೇನು ಎಂಬ ಕುತೂಹಲ ಇದ್ದೇ ಇದೆ. ಶೂಟಿಂಗ್ ಸ್ಥಳದ್ಲಲಿ ನಡೆದ ಘಟನೆಯನ್ನು ರಮ್ಯಾ ಹಾಗೂ ಸುದೀಪ್ ತಮ್ಮದೇ ಧಾಟಿಯಲ್ಲಿ ವಿವರಿಸಿದ್ದು ಹೀಗೆ...
MOKSHA
ಸುದೀಪ್: ''ಒಂದು ನೃತ್ಯ ದೃಶ್ಯವನ್ನು ರಿಟೇಕ್ ತೆಗೆದುಕೊಳ್ಳಬೇಕು. ಆ ದೃಷ್ಯದಲ್ಲಿ ಮುಖದ ಮೇಲೆ ಕೂದಲು ಬಂದಿತ್ತು ಎಂದು ರಮ್ಯಾ ಕೊರಿಯೋಗ್ರಾಫರ್ ಹರ್ಷ ಬಳಿಯಲ್ಲಿ ಕೇಳಿದರು. ಆಗ ಹರ್ಷ ಅವರು ರಮ್ಯಾ ಬಳಿ, 'ಆ ನೃತ್ಯದ ದೃಶ್ಯ ಚೆನ್ನಾಗಿಯೇ ಮೂಡಿ ಬಂದಿದೆ. ಅದಕ್ಕೆ ರಿಟೇಕ್ ಅಗತ್ಯವಿಲ್ಲ' ಎಂದು ಉತ್ತರಿಸಿದರು. ಆದರೆ ರಮ್ಯಾ ತಕ್ಷಣ ಸಿಟ್ಟು ಮಾಡಿಕೊಂಡು, 'ಐ ಡೋಂಟ್ ಕೇರ್ ಎಂಬೌಟ್ ಯುವರ್ ಡ್ಯಾನ್ಸ್' ಅನ್ನುತ್ತಾ ಹಿಯಾಳಿಸಲು ಶುರು ಮಾಡಿದರು. ಇದಕ್ಕೆ ಹರ್ಷ ಅವರು, 'ಐ ಡೋಂಟ್ ಕೇರ್ ಎಬೌಟ್ ದಿ ಹೇರ್ ಆನ್ ಯುವರ್ ಫೇಸ್' ಅಂದರು. ಕೋಪಗೊಂಡ ರಮ್ಯಾ ಶೂಟಿಂಗ್ ಸ್ಥಳದಿಂದ ಹೊರನಡೆದರು.
ಸ್ವಲ್ಪ ಹೊತ್ತಾದ ಮೇಲೆ ಮತ್ತ ವಾಪಸ್ ಬಂದ ರಮ್ಯಾ, ಹರ್ಷ ಅವರ ಸಹಾಯಕನನ್ನು, 'ಟೀಚ್ ಮಿ ಪ್ರಾಪರ್ ಸ್ಟೆಪ್ಸ್!' ಅಂದ ಜೋರಾಗಿ ಬೈದರು. ಹಾಗೆ ಬೈದು ಮತ್ತೆ ರಮ್ಯಾ ಶೂಟಿಂಗಿಂದ ಹೊರನಡೆವಾಗ ನಾನು ತಡೆದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದರಿಂದ ನಾನು ಮಧ್ಯಪ್ರವೇಶಿಸಲೇ ಬೇಕಾಯ್ತು. ಆಗ ನನ್ನನ್ನು ಉದ್ದೇಶಿಸಿ ರಮ್ಯಾ, ಕೆಟ್ಟ ಶಬ್ದಗಳಲ್ಲಿ ಬೈದರು. ಇಂಥ ಬೈಗುಳದಿಂದ ನನ್ನ ಸಹನೆಯ ಕಟ್ಟೆ ಒಡೆಯಿತು. ಈಗಾಗಲೇ ಚಿತ್ರಕ್ಕಾಗಿ ಲಕ್ಷಗಟ್ಟಲೆ ದುಡ್ಡು ವೆಚ್ಚ ಮಾಡಿದ್ದಾಗಿದೆ. ಕೇವಲ 20 ಶೇಕಡಾದಷ್ಟು ಮಾತ್ರ ಚಿತ್ರ ಬಾಕಿಯಿದೆ. ನಾನೇ ಬರೆದ ಕಥೆಯಿದು. ಚಿತ್ರಕಥೆಯೂ ನನ್ನದೇ. ಚಿತ್ರದಲ್ಲಿ ಇನ್ನುಳಿದ ದೃಶ್ಯಗಳಿಗೆ ರಮ್ಯ ಇಲ್ಲದೆ ಹೇಗೆ ಶೂಟಿಂಗ್ ಮಾಡಬಹುದು ಎಂಬುದು ನನಗೆ ಗೊತ್ತು.''
MOKSHA
ರಮ್ಯ: ''ನಾನು ಹರ್ಷ ಅವರಲ್ಲಿ ಒಂದು ನೃತ್ಯ ದೃಶ್ಯದ ಎಕ್ಸ್‌ಟ್ರಾ ಟೇಕ್ ತೆಗೆದುಕೊಳ್ಳತ್ತೇನೆಂದು ಹೇಳಿದೆ. ಆದರೆ ಹರ್ಷ ಬೇಡ ಅಂದರು. ಇದಕ್ಕೆ ಸಿಟ್ಟು ಬಂದು ನಾನು ಶೂಟಿಂಗ್‌ನಿಂದ ಹೊರಬಂದೆ. ಆದರೆ ಮತ್ತೆ ಶೂಟಿಂಗ್‌ಗೆ ಮರಳಿದ್ದ್ಯಾಕೆ ಎಂದರೆ ನಿರ್ಮಾಪಕ ಶಂಕರ್ ಗೌಡ ನನ್ನ ಬಳಿ ಕಂಡಿತವಾಗಿಯೂ ರಿಟೇಕ್ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ಮರಳಿದ ಮೇಲೆ ಹರ್ಷರ ಸಹಾಯಕ ನೃತ್ಯದ ಸ್ಟೆಪ್ ಹೇಳಿಕೊಡಲು ಶುರು ಮಾಡಿದರು. ಆದರೆ ಮಧ್ಯಮಧ್ಯದಲ್ಲಿ ಹರ್ಷ ಅವರು 'ಸಹಾಯಕನಿಗೆ ಹಾಗಲ್ಲ, ಹೀಗೆ' ಎಂದು ಹೇಳುತ್ತಿದ್ದರು. ಅದಕ್ಕೆ ನಾನು ಸಹಾಯಕರಲ್ಲಿ ಹೇಳಿದೆ, 'ಮೊದಲು ಹರ್ಷ ಅವರಲ್ಲಿ ಕಲಿತುಕೋ, ಆಮೇಲೆ ನನಗೆ ಕಲಿಸು' ಎಂದು. ಇಲ್ಲವಾದರೆ ಮತ್ತೆ ಸರಿಯಾಗಿ ನೃತ್ಯ ಮಾಡಿಲ್ಲವೆಂದು ನನ್ನ ಕಾಲೆಳೆಯುತ್ತಿದ್ದರು. ಅದಕ್ಕೆ ಹರ್ಷ ಎಲ್ಲರಲ್ಲಿ, 'ಕೇವಲ ಒಂದೇ ಬಾರಿ ಕಲಿಸಿ, ನಂತರ ರಮ್ಯ ಮಾಡಲಿ ನೋಡೋಣ' ಎಂದರು. ಇದಕ್ಕೆ ನನಗೆ ಸಿಟ್ಟು ಬಂದು ವಾಪಸ್ ಶೂಟಿಂಗ್‌ನಿಂದ ಹೊರನಡೆದು ನನ್ನ ಕಾರಿನಲ್ಲಿ ಹೋಗಿ ಕುಳಿತುಕೊಂಡೆ. ಆಗ ಸುದೀಪ್ ಓಡಿ ಬಂದು ನನ್ನ ಡ್ರೈವರ್ ಬಳಿ ಕಾರು ಚಲಾಯಿಸಬೇಡ ಎಂದು ಬೆದರಿಸಿದರು. ಆದರೂ, ನಾನು ಮನೆಗೆ ಹೋದೆ.
ನಂತರ ಮಾರನೇ ದಿನ ಶೂಟಿಂಗ್‌ಗೆ ಬರುವ ಮೊದಲೇ ನನಗೆ ಮೈಗ್ರೇನ್ ಇತ್ತು. ಅದಕ್ಕಾಗಿ ಕೇವಲ ಒಂದೇ ದೃಶ್ಯದಲ್ಲಿ ನಟಿಸಿ ಮನೆಗೆ ಬಂದೆ. ನಿರ್ಮಾಪಕ ಶಂಕರ್ ಗೌಡ ಅವರಿಗೆ ಫೋನ್ ಮಾಡಿ, 'ನಾನು ಕೇವಲ ಒಂದೇ ದೃಶ್ಯದಲ್ಲಿ ಒಂದೇ ಟೇಕ್‌ನಲ್ಲಿ ನಟಿಸಿ ಮರಳಿದ್ದೇನೆ' ಎಂದೆ. ನಿರ್ಮಾಪಕರು 'ಇನ್ನೂ ಎರಡು ದೃಶ್ಯಗಳಲ್ಲಿ ಅಭಿನಯಿಸಬೇಕು' ಅಂದರು. ಮೈಗ್ರೇನ್ ಇದ್ದಾಗ ಆ ಮಾತ್ರೆ ನುಂಗಿದರೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ನಗೆ ಗೊತ್ತಿತ್ತು. ಆದರೂ, ನಟಿಸಬೇಕೆಂದು ಶೂಟಿಂಗ್ ಸ್ಥಳಕ್ಕೆ ಬಂದೆ. ಅಲ್ಲಿ ಮಾತ್ರೆ ಪ್ರಭಾವದಿಂದ ತಲೆತಿರುಗಿ ಬಿದ್ದೆ. ನಿರ್ಮಾಪಕರು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು.''