ತನ್ನ ಪಾತ್ರದ ಬಗ್ಗೆ ಒಂಚೂರು ಸುಳಿವನ್ನು ಬಿಟ್ಟುಕೊಡಬಾರದು ಎಂದು ನಿರ್ದೇಶಕರು ತನಗೆ ತಾಕೀತು ಮಾಡಿದ್ದರೆ ಎನ್ನುತ್ತಾರೆ ನಟ ಸತ್ಯಾ. ಕಳೆದ ವಾರವಷ್ಟೇ ಆರಂಭಗೊಂಡ ಎಕೆ 56 ಚಿತ್ರೀಕರಣದ ಬಗ್ಗೆ ಮಾತಾನಾಡುತ್ತಿದ್ದರು.
ಈ ಚಿತ್ರದಲ್ಲಿ ನಾಯಕನ ಜತೆಯಾಗಿ, ಸಿನಿಮಾದ ಕೊನೆಯವರೆಗೆ ಇರುವ ಪಾತ್ರ ಅವರದಂತೆ. ಈ ಹಿಂದಿನ ಚಿತ್ರಗಳಂತೆ ಅವರಿಗೆ ಇದರಲ್ಲಿ ಗಂಭೀರ ಪಾತ್ರ ಇಲ್ಲವಂತೆ. ಒಂಚೂರು ಹಾಸ್ಯದ ಲೇಪವಿರುವ ಪಾತ್ರ ಎಂದಷ್ಟೆ ಹೇಳುವ ಸತ್ಯಾ ತಮ್ಮ ಚಿತ್ರದ ಬಗ್ಗೆ ಮಾತ್ರ ಗುಟ್ಟು ಬಿಟ್ಟು ಕೊಟ್ಟಿಲ್ಲ.
ನಾಯಕನಾಗಿ ನಟಿಸಿರುವ ಸತ್ಯಾರ ಮೊದಲ ಚಿತ್ರ ಗುಂಡ್ರಗೋವಿ. ಮುಂದಿನ ತಿಂಗಳು ಈ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದೆ. ಇದರ ಬಳಿಕ ಕಾಟಿ, ಕಲಾತ್ಮಕ ಚಿತ್ರ ಇಜ್ಜೋಡು ಚಿತ್ರದಲ್ಲಿ ನಟಿಸುತ್ತಿದ್ದಾರೆ.