ಪ್ರಕಾಶ್ ರೈ ಅವರ ಮಗಳಾಗಿ ನಟಿಸುವ ಅವಕಾಶ ರಮ್ಯಗೆ ಒಲಿದಿರೋದು ಹಳೇ ಸಂಗತಿ. ತಮಿಳಿನ ಅಭಿಯಂ ನಾನುಂ ಚಿತ್ರ ಈಗ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ತಮಿಳಿನಲ್ಲಿ ಪ್ರಕಾಶ್ ಹಾಗೂ ತ್ರಿಶಾ ನಟಿಸಿದ್ದು ರಮ್ಯ ಆ ಪಾತ್ರವನ್ನು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ಚಿತ್ರ ಬಿಡುಗಡೆಯ ನಂತರವೇ ನೋಡಬೇಕು ಎಂಬುದೆಲ್ಲಾ ಈಗ ಹಳೆಯ ವಿಚಾರವೇ ಆಗಿದೆ.
ಅಂದ ಹಾಗೆ, ಹೊಸ ಸುದ್ದಿಯೇನಂದರೆ, ಇದೀಗ ಈ ಚಿತ್ರಕ್ಕೆ ನಾಯಕನ ಆಯ್ಕೆಯೂ ಆಗಿದೆ. ಈ ಚಿತ್ರದಲ್ಲಿ ತಮಿಳಿನ ಅಭಿಯಂ ನಾನುಂ ಚಿತ್ರದ ನಾಯಕ ನಟನಾಗಿ ಅಭಿನಯಿಸಿರುವ ಗಣೇಶ್ ವೆಂಕಟರಾಮನ್ ಈ ಚಿತ್ರದ ನಾಯಕನಾಗಲು ಸಂತೋಷದಿಂದಲೆ ಒಪ್ಪಿಕೊಂಡಿರುವುದು ವಿಶೇಷ.
MOKSHA
ಪ್ರಥಮ ಬಾರಿಗೆ ಪ್ರಕಾಶ್ ರೈ ನಿರ್ಮಾಣ ಮತ್ತು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಇದು ನಾನು ನನ್ನ ಕನಸು ಮೂಲಕ ಇದನ್ನು ಸಾಕಾರಗೊಳಿಸುತ್ತಿದ್ದಾರೆ. ಇದರಲ್ಲಿ ರೈ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತ ರಮ್ಯಾಗೆ ಪ್ರಕಾಶ್ ಅಂದ್ರೆ ತುಂಬಾ ಇಷ್ಟವಂತೆ. ಅವರ ಮಾರ್ಗದರ್ಶನದಲ್ಲಿ ನಟಿಸುವುದು ಹೆಮ್ಮೆಯ ಸಂಗತಿಯಾಗಿದೆ ಅನ್ನುತ್ತಾರೆ ರಮ್ಯಾ. ಅದೇನೇ ಇರಲಿ, ರಮ್ಯಾ ಎನೋ ಖುಷಿಯಿಂದಲೇ ಒಪ್ಪಿಕೊಂಡಿದ್ದಾಳೆ. ಆದರೆ ಜಸ್ಟ್ ಮಾತ್ ಮಾತಲಿ ಚಿತ್ರದಲ್ಲಿ ಮಾಡಿದಂತೆ ಮತ್ತೆ ಕಿರಿಕ್ ಮಾಡಿಕೊಳ್ಳದಿದ್ದರೆ ಸಾಕು ಅನ್ನುತ್ತಿದ್ದಾರೆ ಗಾಂಧಿನಗರದ ಪಂಡಿತರು.