ಅತ್ಯಂತ ಕಡಿಮೆ ವಯಸ್ಸಿನಲ್ಲೇ ಹೀರೋ ಪಟ್ಟವೇರಿದ ಲೂಸ್ ಮಾದ ಖ್ಯಾತಿಯ ಯೋಗೀಶ್ ಜತೆಗೆ ಗಾಸಿಪ್ಗಳಿಗೇನೂ ಕೊರತೆಯಿಲ್ಲ. ಸಿನಿಮಾ ರಂಗದ ಕೆಲವು ನಟಿಯರ ಹೆಸರು ಯೋಗೀಶ್ ಜತೆ ಗಾಂಧಿನಗರಿಯಲ್ಲಿ ಗಿರಕಿ ಹೊಡೆಯುತ್ತಿದೆ. ಆದರೀಗ, ಅಂಥ ಗಾಸಿಪ್ಪಿಗೆಲ್ಲ ತಲೆಕೆಡಿಸದಿರುವ ನಿರ್ಧಾರ ಕೈಗೊಂಡಿದ್ದಾರೆ ಯೋಗೀಶ್. ತನ್ನ ಸಿನಿಮಾ ಕೆಲಸ ಬಿಟ್ಟು ಬೇರೆ ಯಾವ ಕಡೆಗೂ ಗಮನಕೊಡೊಲ್ಲ. ಗಾಸಿಪ್ಗಳ ಕಡೆಗೆ ಗಮನ ಕೊಟ್ಟರೆ ತನ್ನ ಕೆಲಸ ಕೆಡುತ್ತೆ, ಅದಕ್ಕಾಗಿ ಸಿನಿಮಾ ಬಿಟ್ಟು ಬೇರೇನೂ ಗಮನ ಕೊಡಲ್ಲ ಎನ್ನುತ್ತಾರೆ ಯೋಗೀಶ್.
ರಾವಣ, ಯೋಗಿ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಐಂದ್ರಿತಾಗೆ ಯೋಗೀಶ್ ಜತೆ ತಮಿಳಿನ ರಿಮೇಕ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಯೋಗೀಶ್ ಜತೆ ಈ ಹಿಂದೆಯೇ ನಟಿಸುವ ಆವಕಾಶ ಸಿಕ್ಕಿದ್ದರೂ, ಡೇಟ್ಸ್ ಸಮಸ್ಯೆಯಿಂದ ಸಾಧ್ಯವಾಗಿಲ್ಲ ಎನ್ನುತ್ತಾರೆ ಅವರು.
ಐಂದ್ರಿತಾಗೆ ನಟರಿಗಿಂತ ನಿರ್ದೇಶಕರೇ ಮುಖ್ಯ. ವಾಯುಪುತ್ರದ ಅಭಿನಯಕ್ಕೆ ಉತ್ತಮ ಪ್ರಶಂಸೆ ಬಂದಿದ್ದು, ಅದನ್ನೇ ನಾನು ಮನಸಾರೆ ಚಿತ್ರದಲ್ಲೂ ನಿರೀಕ್ಷಿಸುತ್ತಿದ್ದೇನೆ. ಅಲ್ಲದೆ ಸಧ್ಯಕ್ಕೆ ಕನ್ನಡ ಚಿತ್ರರಂಗ ಬಿಟ್ಟು ಎಲ್ಲೂ ಹೋಗೊಲ್ಲ ಎನ್ನುವುದು ಐಂದ್ರಿತಾ ಮಾತು.