ರಮೇಶ್‌ಗಿದು ಕವಿ ಸಮಯ
ಕವಿಗಳ ಹಾಡುಗಳನ್ನು ಕನ್ನಡದ ಚಿತ್ರರಂಗದಲ್ಲಿ ಅಳವಡಿಸುವುದು ಇಂದು ನಿನ್ನೆಯದಲ್ಲ ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಹೀಗೆ ಆನೇಕ ಕವಿಗಳ ಹಾಡುಗಳನ್ನು ಬಳಸಿಕೊಳ್ಳಲಾಗುತ್ತಿತ್ತು.ಆದರೆ ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಕವಿಗಳ ಕಾವ್ಯಗಳನ್ನು ಹಾಡುಗಳಾಗಿ ಬಳಸಿಕೊಳ್ಳುವುದು ಕಡಿಮೆ ಆಗಿದೆ. ಇದೀಗ ರಮೇಶ್ ಅರವಿಂದ್ ಅಭಿನಯದ ಹಾಸ್ಯ ಭರಿತ 'ಕ್ರೇಜಿ ಕುಟುಂಬ' ಚಿತ್ರಕ್ಕೆ ಕನ್ನಡ ಕವಿಗಳ ಕಾವ್ಯಗಳನ್ನು ಬಳಸಿಕೊಳ್ಳುವ ಮೂಲಕ ಮತ್ತೊಮ್ಮೆ ಹಳೆ ಪದ್ದತಿಯನ್ನು ಪುನರಾವರ್ತಿಸಿದ್ದಾರೆ.ಕುವೆಂಪುರವರ 'ನಡೆ ಮುಂದೆ ನಡೆ ಮುಂದೆ' ಚಿತ್ರ ಈ ಹಿಂದೆ ಮಾರ್ಗದರ್ಶಿ ಸಿನಿಮಾದಲ್ಲಿ ಬಳಸಿಕೊಂಡಿದ್ದರೂ ಅದನ್ನೇ ಮರುಸಂಯೋಜಿಸಿ ಹಾಕಲಿದ್ದಾರೆ. ಅದಲ್ಲದೆ ಈ ಚಿತ್ರದಲ್ಲಿ ಕೆ.ಎಸ್. ನರಸಿಂಹಸ್ವಾಮಿ ಸ್ವಾಮಿಯವರ 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ', ಎಚ್.ಎಸ್. ವೆಂಕಟೇಶ್ ಮೂರ್ತಿಯವರ 'ಅಮ್ಮ ನಾನು ದೇವರಾಣೆ', ಜಯಂತ್ ಕಾಯ್ಕಿಣಿಯವರ 'ಜತೆಗಿರುವನು ಚಂದಿರ' ನಾಟಕದ ಹಾಡುಗಳನ್ನು ಈ ಚಿತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ.