ರವಿಚಂದ್ರನ್ 'ಹೂ'ವಾಗುತ್ತಿರುವುದು ಗೊತ್ತೇ ಇದೆ. ಅರ್ಥಾತ್, ಹೂ ಚಿತ್ರದ ನಿರ್ದೇಶನ, ನಟನೆಯಲ್ಲಿ ಬ್ಯುಸಿಯಾಗಿರೋದು ಗೊತ್ತಿದೆ. ಈಗ ರವಿಚಂದ್ರನ್ ಇನ್ನೊಂದು ಚಿತ್ರದತ್ತ ಸದ್ದಿಲ್ಲದೆ ತಯಾರಾಗಿದ್ದಾರೆ. ಚಿತ್ರಕ್ಕೆ ಕೀಚಕ ಎಂಬ ನೆಗೆಟಿವ್ ನಾಮಧೇಯವನ್ನೂ ಇಟ್ಟಿದ್ದಾರೆ ಎಂಬ ಸುದ್ದಿ ಗಾಂಧಿನಗರಿಯಲ್ಲಿ ಹಬ್ಬಿದೆ.
ಹೌದು. ಕೀಚಕ ಎಂಬ ನಾಮಧೇಯ ಬಹುತೇಕ ಅಂತ್ಯವಾಗಿದೆ. ಆದರೂ ಬದಲಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಗಾಂಧಿನಗರದ ಪಂಡಿತರು. ಚಿತ್ರಕ್ಕೆ ಅನಾಥರು ಚಿತ್ರದ ನಿರ್ಮಾಣ ಮಾಡಿದ ಮುನಿರತ್ನ ನಿರ್ಮಾಪಕರಂತೆ. ಈ ಚಿತ್ರಕ್ಕೆ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆಗಳು ನಡೆಯಬೇಕಾಗಿದೆ.
ಮಂಜಿನ ಹನಿ ಎಂಬ ಚಿತ್ರವನ್ನು ಮಂಜಿನ ಹನಿಯಲ್ಲೇ ತೋಯಿಸಿದ ಬಗ್ಗೆಯೂ ರವಿಚಂದ್ರನ್ ಬಗೆಗಿನ ಮಾಹಿತಿಯಿದೆ. ಒಮ್ಮೆ ಮಾಡಿದ ಸೂಟಿಂಗ್ ಇಷ್ಟವಾಗಲಿಲ್ಲವೆಂದು ಮತ್ತೊಮ್ಮೆಯೂ ಮಂಜಿನ ಹನಿಗಾಗಿ ಶೂಟಿಂಗ್ ನಡೆಸಿದ್ದರು ಈ ಕನಸುಗಾರ ರವಿಚಂದ್ರನ್. ಅಂತೂ ಮಂಜಿನ ಹನಿ ಬಹುತೇಕ ಪೂರ್ಣಗೊಂಡ ಬಗ್ಗೆ ಮಾಹಿತಿಯಿದೆ. ಅಷ್ಟರಲ್ಲೇ ಹೂ ಚಿತ್ರವನ್ನೂ ಈಗಾಗಲೇ ಆರಂಭಿಸಿ ಬಿಟ್ಟು ಎರಡು ವಾರಗಳಾದವು. ಹೂಗೆ ನಮಿತಾ ನಾಯಕಿಯಾದರೆ, ವೀರಮದಕರಿ ಚಿತ್ರದ ಮೂಲಕ ಸುದೀಪ್ ಜತೆ ಠೂ ಬಿಟ್ಟ ದಿನೇಶ್ ಗಾಂಧಿ ನಿರ್ಮಾಪಕರು.