ಉಗ್ರಗಾಮಿಗಳು ತಮ್ಮ ತತ್ವಕಾಗಿ ಹೋರಾಟ ಮಾಡಿದರೆ, ಪ್ರೇಮಿಗಳು ತಮ್ಮ ಪ್ರೀತಿಗಾಗಿ ಹೋರಾಟ ಮಾಡುತ್ತಾರೆ. ಇವರೇ ಪ್ರೇಮಿಗಾಮಿಗಳು ಎನ್ನುತ್ತಾರೆ ನಿರ್ದೇಶಕ ಶ್ರೀನಿವಾಸ್.
ನಮ್ಮ ಪ್ರಪಂಚವೇ ಪ್ರೀತಿ ಮತ್ತು ಕಲೆಯ ಮೇಲೆ ನಿಂತಿದೆ. ಪ್ರೇಮಿಗಾಮಿ ಕೂಡಾ ಇದಕ್ಕೆ ಒಂದು ನಿದರ್ಶನವಾಗಿದೆ ಎನ್ನುತ್ತಾರೆ. ಜಾಹೀರಾತು ಕಂಪೆನಿಗಳಲ್ಲಿ 30 ಸೆಕೆಂಡುಗಳಲ್ಲಿ ಹೇಳಬೇಕಾದದ್ದನ್ನು ಹೇಳಿ ಮುಗಿಸುವ ಶ್ರೀನಿವಾಸ್, ಸಿನಿಮಾದಲ್ಲಿ ಸಿಗುವ 8100 ಸೆಕುಂಡುಗಳಲ್ಲಿ ದೃಶ್ಯಗಳ ಮೆರವಣಿಗೆಯನ್ನೇ ಮಾಡಿಸಬಲ್ಲೆ ಎನ್ನುತ್ತಾರೆ. ಇದಕ್ಕಾಗಿಯೇ ಏನೋ ಜಾಹೀರಾತಿನಿಂದ ಸಿನಿಮಾ ಜಗತ್ತಿಗೆ ನಿರ್ದೇಶಕನಾಗಿ ಭಡ್ತಿ ಪಡೆದದ್ದು.
ಈ ಚಿತ್ರಕ್ಕಾಗಿ ತಲಕಾಡು, ಮಡಿಕೇರಿ ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಈಗಾಗಲೇ 14 ಸ್ಕ್ರಿಪ್ಟ್‌ಗಳನ್ನು ಮಾಡಿರುವ ಇವರಿಗೆ ಪ್ರೇಮಿಗಾಮಿ ಮೊದಲ ಚಿತ್ರ. ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.