ಹೊಸ ಹುಡುಗರೆಲ್ಲರೂ ಸೇರಿ ಮಾಡಿರುವ ಹೊಸ ಚಿತ್ರವೇ ಮ್ಯಾಡ್ ಲವ್. ಹೆಸರೇ ಹೇಳುವಂತೆ, ಪ್ರೀತಿ ಸಿಗದೇ ಹೋದಾಗ ನಾಯಕ ಮಾನಸಿಕ ಅಸ್ವಸ್ಥನಾಗುವುದೇ ಚಿತ್ರದ ಕತೆ. ಇದೊಂದು ಸಾಕಷ್ಟು ಏಳು-ಬೀಳುಗಳನ್ನು ಕಷ್ಟ-ನಷ್ಟಗಳನ್ನು ಕಂಡಿರುವ ಚಿತ್ರವಾಗಿದೆ ಎನ್ನುತ್ತಾರೆ ನಿರ್ದೇಶಕ ತೇಜ.
ನಾಯಕನಿಂದ ಹಿಡಿದು ಎಲ್ಲರಿಗೂ ಇದು ಹೊಸ ಚಿತ್ರ. ಈ ಚಿತ್ರದ ನಾಯಕನಾಗಿ ರಾಮು ಹಾಗೂ ನಾಯಕಿಯಾಗಿ ರವೀನ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ಮಾನಸಿಕ ಅಸ್ವಸ್ಥನೊಬ್ಬ ಸಂಸ್ಕಾರಗೊಂಡ ನಾಯಕಿಯ ದೇಹವನ್ನು ಸಮಾಧಿಯಿಂದ ತೆಗೆದು ಅದರ ಜತೆ ಜೀವನ ನಡೆಸುವ ಕತೆಯನ್ನು ಈ ಚಿತ್ರ ಒಳಗೊಂಡಿದೆ ಎನ್ನುತ್ತಾರೆ ನಿರ್ದೇಶಕ.
ಚಿತ್ರ ನೈಜತೆಯಿಂದ ಮೂಡಿ ಬರಲಿ ಎಂಬ ಉದ್ದೇಶದಿಂದ ನಾಯಕ ರಾಮು ಅನೇಕ ವೈದ್ಯರನ್ನು, ಮಾನಸಿಕ ಅಸ್ವಸ್ಥರನ್ನು ಭೇಟಿ ಮಾಡಿ ಅವರ ನಡೆ ನುಡಿಗಳನ್ನು ಗಮನಿಸಿ ಪಾತ್ರಕ್ಕೆ ಜೀವ ತುಂಬಿದ್ದಾರಂತೆ. ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವ ಕುತೂಹಲ ಇದೆ ಎನ್ನುತ್ತಾರೆ ಹಿರಿಯ ಸಾಹಿತಿ ದೊಡ್ಡರಂಗೆಗೌಡರು. ಚಿತ್ರಕ್ಕೆ ಎಲ್.ಎನ್. ಗೊಚಿ ಸಂಗೀತ ನೀಡಿದ್ದು ಕ್ಯಾಮರಮೆನ್ ಆನಂದ್ ತಮ್ಮ ಛಾಯಾಗ್ರಹಣದ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ.