ಬಿ.ಸಿ ಪಾಟೀಲ್ ಬಹಳ ವರ್ಷಗಳ ಬಳಿಕ ಸೆಲ್ಯೂಟ್ ಹೊಡೆಯಲಿದ್ದಾರೆ .ಸುಮಾರು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಾಲಿಡುವ ಮನಸ್ಸು ಮಾಡಿ ನಿರ್ಮಿಸಿ ನಟಿಸಿರುವ ಚಿತ್ರವೇ ಸೆಲ್ಯೂಟ್. ಈ ಬಾರಿ ಚಿತ್ರ ಗೆಲ್ಲುವುದು ಖಂಡಿತಾ ಎನ್ನುವ ಆತ್ಮವಿಶ್ವಾಸ ಅವರಲ್ಲಿದೆ.
ಅ. 2ರ ಗಾಂಧಿ ಜಯಂತಿಯಂದು ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಯಾವುದೇ ರೀತಿಯ ರಕ್ತಪಾತ, ಅಶ್ಲೀಲ, ಅಸಹ್ಯ ದೃಶ್ಯ ಯಾವುದು ಇಲ್ಲದಿದ್ದರೂ ಸೆನ್ಸಾರ್ ಮಂಡಳಿ ತಗಾದೆ ಮಾಡಿದ್ದು ಯಾಕೆ ಎಂದರೆ, ಇಲ್ಲಿ ಮುಖ್ಯಮಂತ್ರಿ ಕಂಡಲ್ಲಿ ಗುಂಡಿಕ್ಕಿ ಎನ್ನುವ ಆರ್ಡರ್ ನೀಡುವ ಸನ್ನಿವೇಶವಿದೆ. ಆದರೂ, ಕೊನೆಗೂ ಹೋರಾಡಿ ಸರ್ಟಿಫಿಕೇಟ್ ಪಡೆದಿದ್ದೇನೆ ಎನ್ನುತ್ತಾರೆ ಅವರು.
ಈ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಶ್ವಿನಿ ಅಭಿನಯಿಸಿದ್ದಾರೆ. ಅಶ್ವಿನಿ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.