ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮಗನ 'ಗಿಲ್ಲಿ': ಕಣ್ತುಂಬಿಕೊಂಡು ಭಾವುಕರಾದ ಜಗ್ಗೇಶ್! (Gilli | Jaggesh | Gururaj | Yathiraj)
ಸುದ್ದಿ/ಗಾಸಿಪ್
Feedback Print Bookmark and Share
 
Gururaj and Rakul in Gilli
MOKSHA
ಗಿಲ್ಲಿ ಚಿತ್ರ ನಿಮ್ಮ ಜೀವನದ ಕತೆಯೇ? ಎಂದರೆ ಬಹುಷಃ ಜಗ್ಗೇಶ್, ಹೌದು ಆದರೆ ಅಲ್ಲ ಎನ್ನಬಹುದೇನೋ. ಯಾಕೆಂದರೆ ಚಿತ್ರದ ಕಥೆಗೂ ಜಗ್ಗೇಶ್ ಜೀವನಕ್ಕೂ ನೇರಾನೇರ ಸಂಬಂಧವಿಲ್ಲ. ಅದು ತಮಿಳು ಚಿತ್ರ 7ಜಿ ರೇನ್ಬೋ ಕಾಲೊನಿಯ ರಿಮೇಕ್. ಆದರೆ ಪರೋಕ್ಷವಾಗಿ ನೋಡಿದರೆ, ಇದು ತನ್ ಜೀವನದಂತೆಯೇ ಇದೆ ಎಂದು ಕಣ್ಣಂಚಿನಲ್ಲಿ ನೀರು ತಂದುಕೊಂಡರು ಜಗ್ಗೇಶ್.

ಹೌದು. ತಮ್ಮ ಮಗ ಅಭಿನಯಿಸಿದ ಗಿಲ್ಲಿ ಚಿತ್ರದ ಕೆಲವು ದೃಶ್ಯಗಳನ್ನು ನೋಡಿ ಜಗ್ಗೇಶ್ ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು. ತಾವು ಕಷ್ಟಪಟ್ಟ ದಿನಗಳನ್ನು ಚಿತ್ರದ ದೃಶ್ಯಗಳೇ ಅವರಿಗೆ ನೆನಪಿಸಿದ್ದು ವಿಶೇಷ. ನನ್ನ ಜೀವನದಲ್ಲಿನ ಹತಾಶೆ, ನೋವು, ನಲಿವು ಎಲ್ಲವೂ ಈ ಚಿತ್ರದಲ್ಲಿ ಮೂಡಿಬಂದಿದೆ. ಅದರೆ ಇಲ್ಲಿ ವಿಶೇಷ ಎಂದರೆ ನನ್ನ ಜೀವನದ ಪಾತ್ರವನ್ನು ನನ್ನ ಮಗ ಗುರುರಾಜ್ ಅಭಿನಯಿಸುತ್ತಾನೆ ಅಂದರು ಜಗ್ಗೇಶ್.

ಮಗ ಗುರುರಾಜ ಅಂದು ಐಪಿಎಸ್ ಮಾಡುವ ಬಯಕೆ ವ್ಯಕ್ತಪಡಿಸಿದಾಗ ಜಗ್ಗೇಶ್‌ಗೆ ಖುಷಿಯಾಗಿತ್ತಂತೆ. ಆದರೆ, ಇದ್ದಕ್ಕಿದ್ದಂತೆ ನಾಯಕನಾಗುವ ಆಸೆ ಹೇಳಿಕೊಂಡಾಗ ಸ್ವತಃ ಜಗ್ಗೇಶ್ ಅವರಿಗೇ ಅಚ್ಚರಿ. ಚಿತ್ರೋದ್ಯಮದಲ್ಲಿ ಏಗುವುದು ಸುಲಭದ ಮಾತಲ್ಲ ಎಂಬುದು ಅವರ ಸ್ವಂತ ಅನುಭವ.
Gilli
MOKSHA


ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವ ಗುರುರಾಜ್, ಸಿನಿಮಾಭಿಮಾನಿಗಳಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸಲಿದ್ದಾರೆ. ಚಿತ್ರವನ್ನು ನೋಡಿದವರು ಕನ್ನಡಕ್ಕೊಬ್ಬ ನವ ನಾಯಕ ಎಂಟ್ರಿ ಕೊಡುವುದು ಗ್ಯಾರಂಟಿ ಎಂಬುದು ಚಿತ್ರತಂಡದ ಅಂಬೋಣ. ಅದೇನೇ ಇರಲಿ, ಅದನ್ನು ಪ್ರೇಕ್ಷಕರೇ ನಿರ್ಧರಿಸುತ್ತಾರೆ ಅನ್ನೋಣ ಬಿಡಿ.

ಚಿತ್ರದ ಕಥೆ ಮತ್ತು ಪಾತ್ರಗಳು ಇತರ ಸಿನಿಮಾಗಳಂತೆ ಸುಲಭದ ಮಾತಲ್ಲ. ಆದರೆ ಇದನ್ನು ಹೊಸಬರಾದರೂ ಗುರುರಾಜ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎನ್ನುತ್ತಾರೆ ನಿರ್ದೇಶಕ ರಾಘವ ಲೋಕಿ. ಹಾಸ್ಯದಲ್ಲಿ ಸಾಧು ಕೋಕಿಲ ಹಾಗೂ ಜಗ್ಗೇಶ್ ಕಿರಿಯ ಪುತ್ರ ಯತಿರಾಜ್ ಮೊದಲಾದವರಿದ್ದಾರೆ. ಒಟ್ಟಿನಲ್ಲಿ ಅ.2ರಂದು ತೆರೆಕಾಣಲಿರುವ ಚಿತ್ರ ಯಾವ ರೀತಿ ಮೋಡಿ ಮಾಡುತ್ತದೆ ಎಂದು ಕಾದುನೋಡಬೇಕಷ್ಟೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಿಲ್ಲಿ, ಗುರುರಾಜ್, ಯತಿರಾಜ್, ಜಗ್ಗೇಶ್