ಸುದೀಪ್ ಈ ವರ್ಷಕ್ಕೆ ಕೈಗೆ ಸಿಗದಷ್ಟು ಬ್ಯುಸಿಯಾಗಿದ್ದಾರೆ. ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಶೂಟಿಂಗ್ಗಾಗಿ ವಿದೇಶಕ್ಕೆ ಹಾರಿರುಲ ಸುದೀಪ್ಗೆ ಬಾಲಿವುಡ್ ಅವಕಾಶಗಳು ಬಂದಿರುವುದು ಎಲ್ಲರಿಗೂ ತಿಳಿದ ಸಂಗತಿ.
ಈ ಎಲ್ಲವುಗಳ ನಡುವೆ ಎಸ್.ನಾರಾಯಣ್ ಅವರಿಗೆ ಯಾಕೋ ಸುದೀಪ್ ಜತೆಗೆ ಸಿನಿಮಾ ಮಾಡುವ ಮನಸ್ಸಾಗಿದೆ. ಇದನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಎಸ್.ನಾರಾಯಣ್ ಹಾಗೂ ಸುದೀಪ್ ಜತೆ ಸೇರಿ ಒಂದು ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಲಿದ್ದಾರೆ. ಹಲವು ದಿನಗಳಿಂದ ಗಾಂಧಿನಗರದಲ್ಲಿ ಎದ್ದಿದ್ದ ಗುಸುಗುಸು ಮಾತು ಹಾಗಾಗಿ ಅಧಿಕೃತವಾಗುವ ಲಕ್ಷಣ ಕಾಣುತ್ತಿದೆ.
MOKSHA
ಇದಕ್ಕಾಗಿ ತಮಿಳಿನ ಸಾಮಿ ಚಿತ್ರವನ್ನು ಕನ್ನಡಕ್ಕೆ ತರುವ ಪ್ಲಾನ್ ನಡಿತಾ ಇದೆ. ಆದರೆ ಈ ಚಿತ್ರ ಯಾವಾಗ ಪ್ರಾರಂಭ ಆಗುತ್ತಿದೆ ಎನ್ನುವ ಬಗ್ಗೆ ಯಾವುದೇ ರೀತಿಯ ಮಾಹಿತಿಗಳನ್ನು ಯಾರೊಬ್ಬರು ಬಿಟ್ಟುಕೊಡುತ್ತಿಲ್ಲ.
ಒಟ್ಟಾರೆ ಇವರಿಬ್ಬರ ಜೋಡಿ ಬಹಳ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದಂತು ಸತ್ಯ. ಸುದೀಪ್ ಅಭಿನಯಿಸಲಿರುವ ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೆಯೋ ಎಂದು ಕಾಯಬೇಕಾಗುತ್ತದೆ ಯಾಕೆಂದರೆ ಸುದೀಪ್ ಸದ್ಯಕ್ಕೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಸಂಖ್ಯೆ ಅಪಾರವಾಗಿದೆ.