ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡದ ಗಾಯಕರ ಸ್ಥಿತಿಗೆ ನೊಂದ ನಂದಿತಾ (Nanditha | Sonu Nigam | Manomurthy | Shreya ghoshal)
ಸುದ್ದಿ/ಗಾಸಿಪ್
Feedback Print Bookmark and Share
 
ತಮ್ಮ ಅತ್ಯುತ್ತಮ ಗಾಯನಕ್ಕಾಗಿ ಮೂರು ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಗಾಯಕಿ ನಂದಿತಾ ಕೆಲವೊಂದು ಚಿತ್ರಗಳಿಗೆ ತನ್ನನ್ನು ಟ್ರಾಕ್ಯ್ ಸಿಂಗರ್ ಆಗಿ ಬಳಕೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಇದಕ್ಕಾಗಿ ಇತ್ತಿಚೇಗೆ ನಡೆದ ಘಟನೆಯನ್ನು ನಿದರ್ಶನವಾಗಿ ಕೊಡುತ್ತಾ, ಈ ಹಿಂದೆ ಒಮ್ಮೆ ಮನೋಮೂರ್ತಿ ನಿರ್ದೇಶನದ ಹಾಡುಗಳನ್ನು ರಾಜೇಶ್ ಕೃಷ್ಣನ್ ಹಾಗೂ ನಂದಿತಾ ಅವರಿಂದ ಹಾಡಿಸಿದ್ದರಂತೆ. ಆದರೆ ಆ ಹಾಡುಗಳು ಬಿಡುಗಡೆಯಾದಾಗ ಸೋನು ನಿಗಮ್ ಹಾಗೂ ಶ್ರೇಯಾ ಘೋಷಲ್ ಅವರ ದ್ವನಿಯಲ್ಲಿತ್ತು ಎಂಬ ವಿಷಾದ ವ್ಯಕ್ತಪಡಿಸುತ್ತಾರೆ. ಹೀಗಾದಾಗ ಕೆಲವೊಮ್ಮೆ ಬೇಸರವಾಗುತ್ತದೆ ಎಂದು ಚುಟುಕಾಗಿ ಹೇಳಿ ಗಾಢ ಮೌನ ಧರಿಸಿದರು ನಂದಿತಾ. ಆ ಮೌನದಲ್ಲೇ ನೋವಿತ್ತು.

ಕನ್ನಡದಲ್ಲಿ ಗಾಯಕರಿಗೇನು ಬರ ಇಲ್ಲ. ಆದರೂ ಕನ್ನಡ ಗೊತ್ತಿಲ್ಲದವರಿಂದ ಹಾಡಿಸುವುದು ಯಾಕೆ? ಎಂದ ನಂದಿತಾ, ಸೋನು ನಿಗಂ ಹಾಗೂ ಶ್ರೇಯಾ ಘೋಷಾಲ್ ತುಂಬ ಅದ್ಭುತವಾಗಿ ಹಾಡುತ್ತಾರೆ ಎಂಬುದು ನಿಜವೇ. ಅವರು ಎಷ್ಟೇ ಚೆನ್ನಾಗಿ ಹಾಡಿದರೂ ಅವರ ಹಾಡುಗಳನ್ನು ಸಣ್ಣಪುಟ್ಟ ತಪ್ಪುಗಳು ಆಗುತ್ತದೆ. ಯಾಕೆಂದರೆ ಅವರಿಗೆ ಕನ್ನಡದ ಸ್ಲ್ಯಾಂಗ್ ಗೊತ್ತಿಲ್ಲ. ತಪ್ಪಿದರೂ ನಮಗೆ ಬೇಕಾಗಿರುವುದು ಹೊರಗಿನವರು ಮಾತ್ರ ಎನ್ನುತ್ತಾರೆ ವಿಷಾದದಿಂದ.

ಹೀಗೆ ಕನ್ನಡದ ಗಾಯಕರಿಗೆ ಅವಕಾಶ ಕಡಿಮೆಯಾಗುತ್ತಿರುವುದರ ವಿರುದ್ಧ ಹೋರಾಟ ನಡೆಸುವುದು ಎಲ್ಲಿವರೆಗೆ ಬಂತು ಎಂದರೆ ನಂದಿತಾ, ಹೋರಾಟ ಎಲ್ಲ ನಿಂತಿದೆ. ಎಲ್ಲರಿಗೂ ಅವರವರ ಕೆಲಸ ಇದೆ. ನಾಯಕ್ವ ತೆಗೆದುಕೊಳ್ಳಲು ಯಾರೂ ಸಿದ್ಧರಿಲ್ಲ. ಇನ್ನೆಲ್ಲಿಯ ಹೋರಾಟ ಎನ್ನುತ್ತಾರೆ.

ನಂದಿತಾ ಅವರಿಗೆ ಮುಂದೆ ಸಂಗೀತ ನಿರ್ದೇಶನ ಮಾಡುವ ಆಸೆ ಇದೆಯಂತೆ. ಅದಕ್ಕಾಗಿ ಬಹು ತಯಾರಿ ಕೂಡಾ ಮಾಡುತ್ತಿದ್ದೇನೆ. ಅದಕ್ಕೆ ಸಾಕಷ್ಟು ತಯಾರಿಯ ಅಗತ್ಯವಿದೆ. ಮುಂದೊಂದು ದಿನ ಸಂಗೀತಾ ನಿರ್ದೇಶನ ಖಂಡಿತಾ ಮಾಡುತ್ತೇನೆ ಎಂಬ ಭರವಸೆ ಇದೆ ಎನ್ನುತ್ತಾರೆ ಗಾಯಕಿ ನಂದಿತಾ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಂದಿತಾ, ಸೋನು ನಿಗಂ, ಮನೋಮೂರ್ತಿ, ಶ್ರೇಯಾ ಘೋಷಾಲ್