ಪೂಜಾ ಗಾಂಧಿ ಈಗ ಸಖತ್ ಬ್ಯುಸಿಯಂತೆ. ಇತ್ತೀಚೆಗಷ್ಟೇ ಅವರ ತವರಿನ ಋಣದ ಮೊದಲ ಹಂತದ ಚಿತ್ರೀಕರಣ ಮುಗಿಸಿ ಸದ್ಯಕ್ಕೆ ಸಣ್ಣ ಮಟ್ಟಿನ ವಿರಾಮ ತೆಗೆದುಕೊಂಡು ಮತ್ತೆ ಗೋಕುಲ ಚಿತ್ರದ ಹಾಡಿಗಾಗಿ ಮೈಸೂರಿಗೆ ಜಂಬೂ ಸವಾರಿ ಮಾಡಲು ಹೊರಟಿದ್ದಾಳೆ. ಚಿತ್ರಗಳು ತುಂಬಾ ಕೈಯಲ್ಲಿರುವುದರಿಂದ ಯಾವುದಕ್ಕೂ ಟೈಮೇ ಸಿಗುತ್ತಿಲ್ಲ ಎನ್ನುವ ಗೋಳು ಪೂಜಾ ಗಾಂಧಿಯದ್ದು.
ದಯಾಳ್ ನಿರ್ದೇಶನದ ಇನ್ನೊಂದು ಚಿತ್ರ ಹರಿಕಥೆಯ ಚಿತ್ರೀಕರಣವು ಮುಕ್ಕಾಲು ಭಾಗ ಮುಗಿದಿದ್ದು, ತುಂಬಾ ಸೊಗಸಾಗಿ ಮೂಡಿಬಂದಿದೆ ಎಂದು ಫುಲ್ ಖುಷಿಯಗಿದ್ದಾರೆ. ಅಲ್ಲದೆ ಅದರಲ್ಲಿ ಒಂದು ಹಾಡಂತು ಸಂಪೂರ್ಣವಾಗಿ ಅವರ ಮೇಲೆಯೇ ಚಿತ್ರೀಕರಿಸಲಾಗಿದೆ ಎಂದು ಕಣ್ಣುಮಿಟುಕಿಸುತ್ತಾರೆ ಪೂಜಾ.
ಅಲ್ಲದೆ ಪೂಜಾರ ಮಿನುಗು ಚಿತ್ರವು ಶೀಘ್ರದಲ್ಲಿ ತೆರೆಕಾಣಲಿದ್ದು, ಮಿನುಗು ನಿರ್ದೇಶಕ ಮಾಡಲಿರುವ ಇನ್ನೊಂದು ಚಿತ್ರಕ್ಕೂ ಪೂಜಾ ನಾಯಕಿಯಾಗುವ ಸುದ್ದಿಯೊಂದು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಪೂಜಾ ಎಂಬ ದೆಹಲಿಯ ಬೆಡಗಿ ಮುಂಗಾರುಮಳೆಯ ನಂತರ ಕನ್ನಡದಲ್ಲಿ ಚಿತ್ರಗಳ ಸುರಿಮಳೆಯೇ ಸುರಿಸುತ್ತಿರುವುದಂತೂ ಸತ್ಯ.