ಲೂಸ್ ಮಾದ ಯಾನೆ ಯೋಗೀಶ್ ಸದ್ಯಕ್ಕೆ ಈಗ ಗಾಂದಿನಗರದಲ್ಲಿ ಬಹು ಬೇಡಿಕೆಯಲ್ಲಿರುವ ನಾಯಕ. ಅಷ್ಟೇ ಅಲ್ಲ, ವಯಸ್ಸಿನಲ್ಲೂ ಅಲ್ಲದೆ ಕಿರಿಯ ನಾಯಕ ನಟ ಕೂಡಾ. ಅದರೂ ಯೋಗಿ ಕೈಯಲ್ಲಿ ಹತ್ತರೂ ಸಿನಿಮಾಗಳ ಪಟ್ಟಿಯೇ ಇದೆ. ಅದರಲ್ಲಿ ಈಗ ಧೂಳ್ ಚಿತ್ರದ ಚಿತ್ರೀಕರಣ ಮುಕ್ಕಾಲು ಪಾಲು ಮುಗಿದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಧರಣಿ.
ಇದು ತಿರುವಿಳ್ಳೆಯಾಡಲ್ ಆರಂಭಂ ಚಿತ್ರದ ರೀಮೇಕ್. ಆದರೂ ಕೂಡಾ ಅದರಲ್ಲಿದ್ದಂತೆ ನೇರವಾಗಿ ಕಾಪಿ ಮಾಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ಮಾಪಕರಾದ ಸುನಿಲ್.
ಯೋಗೀಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಎಂಟನೆ ಚಿತ್ರ ಇದಾಗಿದ್ದು, ಮೊದಮೊದಲು ಕಷ್ಟವಾಗುತ್ತಿದ್ದ ಅಭಿನಯವನ್ನು ನಾನೀಗ ಅರೆದು ಕುಡಿದಿದ್ದೇನೆ. ಅಲ್ಲದೆ ನನಗೆ ಈ ಸಿನಿಮಾದಲ್ಲಿ ನಟಿಸುವಾಗ ಸಾಕಷ್ಟು ಹೊಸ ಅನುಭವಗಳಾಗಿದೆ ಎಂದರು.
ಮಾತು ಮುಂದುವರಿಸುತ್ತಾ ಅವರು ನಾನೊಬ್ಬ ಕೃಶಕಾಯದ ವ್ಯಕ್ತಿ. ಸಿನಿಮಾದಲ್ಲಿ ಒಮ್ಮೆಗೆ 10 ಜನರನ್ನು ಹೊಡೆದು ಉರುಳಿಸುತ್ತೇನೆ ಎಂದರೆ ನಂಬಲು ಜನರೆಲ್ಲರೂ ಮುರ್ಖರಲ್ಲ. ಅದಕ್ಕಾಗಿ ಸ್ಟಂಟ್ ಮಾಸ್ಟರ್ ರವಿವರ್ಮ ವಿಶೇಷವಾಗಿ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಿದ್ದಾರೆ ಎನ್ನುತ್ತಾರೆ.
ಅಲ್ಲದೆ ಈ ಚಿತ್ರದಲ್ಲಿ ಪ್ರಕಾಶ್ ರೈ ಜತೆ ನಟಿಸುತ್ತಿರುವುದು ನನಗೆ ರೋಮಾಂಚನವಾಗಿದೆ. ಗುರುವಿನ ಸ್ಥಾನದಲ್ಲಿ ನಿಂತು ನನಗೆ ಸಹಾಯ ಮಾಡುತ್ತಾರೆ ಎನ್ನುವ ಹೆಮ್ಮೆ ನನಗಿದೆ ಎನ್ನುತ್ತಾರೆ ಮಾದ.