ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವಮಣಿಯ 'ಜೋಶ್' ತಮಿಳಿಗೆ (Shivamani | S.V.Babu | Josh)
ಸುದ್ದಿ/ಗಾಸಿಪ್
Feedback Print Bookmark and Share
 
Shivamani
MOKSHA
ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಖ್ಯಾತ ನಿರ್ದೇಶಕ ಶಿವಮಣಿಯವರು ಜೋಶ್ ಎಂಬ ಚಿತ್ರವನ್ನು ನೀಡಿ ಯಶಸ್ಸು ಸಾಧಿಸಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇದಕ್ಕಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಸಾವಿರಾರು ಪ್ರತಿಭೆಗಳನ್ನು ಒಂದೆಡೆ ಸಂದರ್ಶನಕ್ಕೆ ಕರೆದು, ಅವರಲ್ಲಿ ಉತ್ತಮರೆನಿಸಿದ ಒಂದಷ್ಟು ಹುಡುಗ-ಹುಡುಗಿಯರನ್ನು ಆರಿಸಿ, ಅವರ ಪ್ರತಿಭೆಗೆ ಸಾಣೆ ಹಿಡಿದು, ಕನ್ನಡ ಚಿತ್ರರಂಗಕ್ಕೆ ಕಾಣಿಕೆಯನ್ನಾಗಿ ನೀಡಿದ್ದು ನಿರ್ದೇಶಕ ಶಿವಮಣಿ ಹಾಗೂ ನಿರ್ಮಾಪಕ ಎಸ್.ವಿ. ಬಾಬುರವರ ಸಾಧನೆಯೆಂದೇ ಹೇಳಬೇಕು.

ಕನ್ನಡ ಚಿತ್ರಗಳು ಕರ್ನಾಟಕದಲ್ಲಿಯೇ ಓಡುವುದಿಲ್ಲ, ಬೆಂಗಳೂರಿನಲ್ಲಂತೂ ಕೇಳುವುದೇ ಬೇಡ ಎಂಬ ಮಾತುಗಳು ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಈ ಜೋಡಿಯು ಇಂಥಾ ಸಾಹಸಕ್ಕೆ ಮುಂದಾಗಿದ್ದು ಅಚ್ಚರಿಯೇ ಎನ್ನಬೇಕು. ಇದನ್ನು ಸವಾಲಾಗಿ ತೆಗೆದುಕೊಂಡ ಶಿವಮಣಿ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದೇ ಅಲ್ಲದೇ, ಪಕ್ಕದ ರಾಜ್ಯದವರ ಗಮನವನ್ನೂ ಸೆಳೆದಿದ್ದಾರೆ.
Josh
MOKSHA


ಎಸ್. ನಿಮ್ಮ ಊಹೆ ನಿಜ. ಜೋಶ್ ಚಲನಚಿತ್ರ ತಮಿಳಿಗೆ ರಿಮೇಕ್ ಆಗುತ್ತಿದೆ. ಹಾಗಂತ ಕೇವಲ ಕಥೆ ಮಾತ್ರ ತಮಿಳಿಗೆ ಹೋಗುತ್ತಿಲ್ಲ. ನಿರ್ದೇಶಕ ಶಿವಮಣಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಸಂಕಲನಕಾರ ಸುರೇಶ್ ಅರಸ್ ಇವರೇ ಮೊದಲಾದವರೂ ಸಹ ತಮಿಳು ಆವೃತ್ತಿಗೆ ಕೆಲಸ ಮಾಡಲಿದ್ದಾರಂತೆ. ಒಂದು ಕಾಲದಲ್ಲಿ ಕನ್ನಡ ಚಿತ್ರಗಳಿಗೆ ಪರಭಾಷಾ ತಂತ್ರಜ್ಞರನ್ನು ಕರೆತರಲಾಗುತ್ತಿದೆ ಎಂಬ ಕೂಗುಗಳು ಕೇಳಿಬರುತ್ತಿದ್ದವು. ಈಗ ಕನ್ನಡ ತಂತ್ರಜ್ಞರೇ ಅಲ್ಲಿಗೆ ಹೋಗುತ್ತಿರುವುದು ವಿಶೇಷ.

ಕಥೆ ಕನ್ನಡದ್ದೇ ಆದರೂ ತಮಿಳಿನ ನೇಟಿವಿಟಿಗೆ ತಕ್ಕಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುವುದಂತೆ. ಅಲ್ಲಿನ ಯುವಜನಾಂಗ ಇಷ್ಟಪಡುವ ಶೈಲಿಯಲ್ಲಿ ಮೂಲಕಥೆಯನ್ನು ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂಬುದು ಶಿವಮಣಿಯವರ ಅಂಬೋಣ. ಅವರಿಗೆ ಯಶಸ್ಸು ಕೋರೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವಮಣಿ, ದೋಶ್, ಎಸ್ವಿಬಾಬು