ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಮ್‌ಕಹಾನಿಗೆ 'ನೋ' ಎಂದ ಪ್ರೇಕ್ಷಕ ಪ್ರಭು (Premkahani | Chandru | Tajmahal)
ಸುದ್ದಿ/ಗಾಸಿಪ್
Feedback Print Bookmark and Share
 
Premkahani
MOKSHA
ತಮ್ಮ ಚೊಚ್ಚಲ ನಿರ್ದೇಶನದ ತಾಜ್‌ಮಹಲ್ ಚಿತ್ರಕ್ಕೆ ವಿಮರ್ಶಕರಿಂದಲೂ, ಪ್ರೇಕ್ಷಕರಿಂದಲೂ ಸಿಕ್ಕ ಅತೀವ ಪ್ರೋತ್ಸಾಹದಿಂದ ಉಬ್ಬಿಹೋಗಿದ್ದ ನಿರ್ದೇಶಕ ಆರ್.ಚಂದ್ರುರವರು ತಮ್ಮ ಎರಡನೇ ಚಿತ್ರವಾದ ಪ್ರೇಮ್‌ಕಹಾನಿಯ ಬಿಡುಗಡೆಯ ಮುನ್ನಾದಿನಗಳಂದು, ನನ್ನ ತಾಜ್‌ಮಹಲ್ ಚಿತ್ರ 100 ದಿನ ಓಡಿದೆ; ಪ್ರೇಮ್‌ಕಹಾನಿ ಚಿತ್ರ 25 ವಾರ ಓಡಿ ರಜತ ಮಹೋತ್ಸವ ಆಚರಿಸುವುದು ಗ್ಯಾರೆಂಟಿ ಎಂಬ ಮಾತುಗಳನ್ನು ಆಡಿದ್ದರು.

ತನ್ನ ಕೂಸಿನ ಕುರಿತಾಗಿ ಈ ರೀತಿಯ ಹೆಮ್ಮೆ ಇರಬೇಕಾದದ್ದು ಸಹಜವೇ ಎಂದು ಭಾವಿಸಿದ್ದ ಉದ್ಯಮ, ಮಾಧ್ಯಮ ಹಾಗೂ ಪ್ರೇಕ್ಷಕರು ಈ ಕುರಿತು ಹೆಚ್ಚೇನೂ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ. ಆದರೀಗ ಫಲಿತಾಂಶ ಹೊರಬಿದ್ದಿದೆ. ಪ್ರೇಕ್ಷಕ ಮಹಾಪ್ರಭು ಪ್ರೇಮ್‌ಕಹಾನಿಯನ್ನು ತಿರಸ್ಕರಿಸಿದ್ದಾನೆ. ಆ ಮೂಲಕ ಪ್ರೇಕ್ಷಕನೇ ಅಂತಿಮ ಪ್ರಭು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ.

ಕೆ.ಎಂ.ವಿಶ್ವನಾಥ್‌ರಂತಹ ಧಣಿಗಣಿ ನಿರ್ಮಾಪಕರಾಗಿರುವುದು, ಸಂಗೀತ ಚಕ್ರವರ್ತಿ ಇಳಯರಾಜಾರವರ ಸಂಗೀತವಿರುವುದು ಹಾಗೂ ತಾಜ್‌ಮಹಲ್‌ನ ಯಶಸ್ಸಿನ ಟ್ಯಾಗ್ ತಮ್ಮೊಂದಿಗೆ ಸೇರಿರುವುದು ಇವೆಲ್ಲವೂ ಅನಾಯಾಸವಾಗಿ ಚಿತ್ರವನ್ನು ಮೇಲೆತ್ತಲಿವೆ ಎಂದೇ ಪ್ರಾಯಶಃ ಚಂದ್ರುರವರು ಭಾವಿಸಿದ್ದರು ಎನಿಸುತ್ತದೆ. ಅದಕ್ಕೆ ತಕ್ಕಂತೆ ಸಾಕಷ್ಟು ಪ್ರಚಾರದ ಪ್ರಯತ್ನವನ್ನೂ ಮಾಡಲಾಗಿತ್ತು. ಆದರೀಗ ಅದೆಲ್ಲವೂ ಹೊಳೆಯಲ್ಲಿ ಹುಣಿಸೇಹಣ್ಣು ಹಾಕಿದಂತೆ ಆಗಿದೆ. ಈಗ ಕೇವಲ ಬೆಂಗಳೂರಿನ ತ್ರಿವೇಣಿ ಮತ್ತು ಮೈಸೂರಿನ ಲಕ್ಷ್ಮಿ ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರ ಓಡುತ್ತಿದೆ. ಆದರೆ, ಮುಂದಿನ ವಾರ ಇದೇ ತ್ರಿವೇಣಿಯಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ 'ಬಳ್ಳಾರಿ ನಾಗ' ಚಿತ್ರ ಬಿಡುಗಡೆಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಚಿತ್ರದ ಕುರಿತಾದ ಒಟ್ಟರ್ಥ ವ್ಯಕ್ತವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರೇಮ್ ಕಹಾನಿ, ಚಂದ್ರು, ತಾಜ್ ಮಹಲ್