ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಎರಡನೇ ಇನ್ನಿಂಗ್ಸ್‌ನಲ್ಲೂ ಮಿಂಚುತ್ತಿರುವ ಲಕ್ಷ್ಮಿ (Laxmi | Anathnag | Edu Katheyalla Jeevana)
ಸುದ್ದಿ/ಗಾಸಿಪ್
Feedback Print Bookmark and Share
 
Laxmi
MOKSHA
ಲಕ್ಷ್ಮಿ ಎಂಬ ಹೆಸರು ಕೇಳಿದರು ಇಂದಿಗೂ ಹಲವರು ಪುಳಕಗೊಳ್ಳುತ್ತಾರೆ. ಡಾ|| ರಾಜ್ ಕುಮಾರ್‌ರವರೊಂದಿಗೆ ಮಾತ್ರವಲ್ಲದೆ, ವಿಷ್ಣುವರ್ಧನ್, ಅಂಬರೀಷ್, ಶಂಕರ್‌ನಾಗ್, ಅನಂತನಾಗ್‌ರಂತಹ ಖ್ಯಾತ ಕಲಾವಿದರೊಂದಿಗೂ ನಟಿಸಿ ಖ್ಯಾತಿ ಪಡೆದ ಕಲಾವಿದೆ ಆಕೆ.

ಅದರಲ್ಲೂ ಅನಂತಾಗ್ ಮತ್ತು ಲಕ್ಷ್ಮಿ ತಾರಾಗಣದಲ್ಲಿ ಬಂದ ಚಂದನದ ಗೊಂಬೆ, ನಾನಿನ್ನ ಬಿಡಲಾರೆ, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ನೋಡಿ ಸ್ವಾಮಿ ನಾವಿರೋದು ಹೀಗೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು ಇವೇ ಮೊದಲಾದ ಸದಭಿರುಚಿಯ ಚಿತ್ರಗಳನ್ನು ಚಿತ್ರರಸಿಕರು ಇಂದಿಗೂ ನೆನಪಿಸಿಕೊಂಡು ಚಪ್ಪರಿಸುತ್ತಾರೆ.

ಒಂದಷ್ಟು ದಿನ ಕನ್ನಡ ಚಿತ್ರರಂಗದಿಂದ ದೂರವಿದ್ದ ಲಕ್ಷ್ಮಿ, ಈಗ ಕಿರುತೆರೆಯ ಮೂಲಕ ಕನ್ನಡಿಗರಿಗೆ ಇನ್ನೂ ಹತ್ತಿರವಾಗಿದ್ದಾರೆ. ಸುವರ್ಣ ವಾಹಿನಿಯಲ್ಲಿ ಅವರು ನಡೆಸಿಕೊಡುವ 'ಇದು ಕಥೆಯಲ್ಲ, ಜೀವನ' ಎಂಬ ಕಾರ್ಯಕ್ರಮ ಅದ್ಭುತ ಯಶಸ್ಸು ಕಾಣುತ್ತಿದೆ. ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಅವರದೇ ಸಿಂಹಪಾಲು ಎನ್ನಬಹುದು. ಕನ್ನಡದ ಇಂದಿನ ಎಷ್ಟೋ ನಟಿಯರಿಗಿಂತ ಸ್ಪಷ್ಟವಾಗಿ, ತಪ್ಪಿಲ್ಲದಂತೆ ಅವರು ಕನ್ನಡ ಮಾತನಾಡುವುದೂ ಸಹ ಇದಕ್ಕೊಂದು ಕಾರಣವಾಗಿರಬಹುದು.

ಇದೇ ತರಹದ ಮತ್ತೆರಡು ಕಾರ್ಯಕ್ರಮಗಳು ಜೀ ಕನ್ನಡ ವಾಹಿನಿ ಹಾಗೂ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿವೆ. 'ಬದುಕು ಜಟಕಾ ಬಂಡಿ' ಹಾಗೂ 'ಇದು ಯಾರು ಬರೆದ ಕಥೆಯೋ' ಎಂಬ ಈ ಕಾರ್ಯಕ್ರಮಗಳನ್ನು ಕ್ರಮವಾಗಿ ಮಾಳವಿಕಾ ಹಾಗೂ ತಾರಾರವರು ನಡೆಸಿಕೊಡುತ್ತಿದ್ದಾರಾದರೂ, ಲಕ್ಷ್ಮಿಯವರ ಕಾರ್ಯಕ್ರಮಕ್ಕೆ ಸಿಕ್ಕಿರುವ ಸ್ಟಾರ್ ವ್ಯಾಲ್ಯೂ ಉಳಿದೆರಡಕ್ಕೆ ಸಿಕ್ಕಿಲ್ಲ ಎಂಬ ಮಾತೂ ಇದೆ. ಒಟ್ಟಿನಲ್ಲಿ ಲಕ್ಷ್ಮಿ ಅಂದಿಗೂ, ಇಂದಿಗೂ ಸೂಪರ್ ಸ್ಟಾರ್ ಆಗುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಕ್ಷ್ಮಿ, ಅನಂತನಾಗ್, ಇದಜು ಕಥೆಯಲ್ಲಜೀವನ, ಸುವರ್ಣವಾಹಿನಿ