ತಮಿಳು, ತೆಲುಗು ಚಿತ್ರದ ಗ್ಲಾಮರ್ ಗೊಂಬೆ ನಯನ್ ತಾರಾ ಕನ್ನಡಕ್ಕೆ ಬರುವುದು ಪಕ್ಕಾಗಿದೆ. ಡೇಟ್ಸ್ ಸಮಸ್ಯೆಯಿಂದಾಗಿ ಎರಡು ವರ್ಷಗಳ ಕಾಲ ಕನ್ನಡದಲ್ಲಿ ಆಫರ್ಗಳಿದ್ದರೂ ನಟಿಸಲು ಸಾಧ್ಯವಾಗದೇ ಇದ್ದ ನಯನತಾರಾ ಈಗ ರವಿಚಂದ್ರನ್ ಅವರ ಕೀಚಕ ಚಿತ್ರದ ಮೂಲಕ ಕನ್ನಡದಲ್ಲಿ ನಟಿಸುತ್ತಿದ್ದಾರೆ.
ಆದರೆ ಶೂಟಿಂಗ್ ಯಾವಾಗ ಎಂಬುದು ಇನ್ನು ಪಕ್ಕಾ ಆಗಿಲ್ಲ. ಈ ಮಲೆಯಾಳಂ ಬೆಡಗಿಗೆ ಹೆಚ್ಚು ಪ್ರಚಾರ ಸಿಕ್ಕಿದ್ದು, ತಮಿಳು ಮತ್ತು ತೆಲುಗು ಚಿತ್ರದಲ್ಲಿ. ತಮಿಳಿನ ಬಿಲ್ಲಾ ಚಿತ್ರದಲ್ಲಿ ಟೂ ಪೀಸ್ ಧರಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ನಯನ್ ತಾರಾಗೆ ನಂತರ ಹೆಚ್ಚು ಅವಕಾಶಗಳು ತೆರೆದವು. ಸಧ್ಯಕ್ಕೆ ತಮಿಳಿನಲ್ಲಿ ಅಧವನ್, ಮಲೆಯಾಳಂನಲ್ಲಿ ಬಾಡಿಗಾರ್ಡ್ ಚಿತ್ರಗಳನ್ನು ಮುಗಿಸಿ ಬಂದಿದ್ದಾರೆ.
ಕೀಚಕ ಚಿತ್ರದ ಕಥೆ ಕೇಳಿ ತುಂಬಾ ಇಂಪ್ರೆಸ್ ಆಗಿದ್ದೇನೆ. ಇದು ತುಂಬಾ ಸೆಂಟಿಮೆಂಟ್ ಚಿತ್ರ ಆಗಿದೆ. ಅಪ್ಪ-ಮಗನ ಸ್ಟೋರಿ ಎಂದು ತಿಳಿದಿದ್ದೇನೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎನ್ನುತ್ತಾರೆ ನಯನತಾರಾ. ಅಂದ ಹಾಗೆ ಇದೇ ವೇಳೆ ಬಾಲಿವುಡ್ನಲ್ಲಿ ಒಳ್ಳೆಯ ಬ್ಯಾನರ್ನಡಿಯಲ್ಲಿ ನಟಿಸುವ ಇಚ್ಛೆಯೂ ನಯನತಾರಾಗಿದೆ.