ವೇಶ್ಯಾವಾಟಿಕೆ ನಡೆಸುತ್ತಿದ್ದ ತಮಿಳಿನ ಜನಪ್ರಿಯ ನಟಿ ಭುವನೇಶ್ವರಿ ಸೇರಿದಂತೆ ಇಬ್ಬರು ಹದಿಹರಯದ ಹುಡುಗಿಯರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಈ ಬಂಧನವಾಗುವ ಮೂಲಕ ಇನ್ನಷ್ಟು ಖ್ಯಾತ ನಟಿಯರ ಹೆಸರು ಬಹಿರಂಗಗೊಂಡಿದ್ದು, ತೆಲುಗು ಹಾಗೂ ತಮಿಳು ಚಿತ್ರರಂಗದ ಇನ್ನೂ ಹೆಚ್ಚಿನ ನಟಿಯರ ಬಂಧನವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಚೆನ್ನೈನ ಅಡ್ಯಾರ್ನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಭುವನೇಶ್ವರಿ ಈ ದಂಧೆ ನಡೆಸುತ್ತಿದ್ದರು. ಪೊಲೀಸರು ಭುವನೇಶ್ವರಿ ಅವರ ವಿಚಾರಣೆ ನಡೆಸುತ್ತಿದ್ದು, ನಂಬಲರ್ಹ ಮೂಲಗಳ ಪ್ರಕಾರ, ಈಗಾಗಲೇ ಭುವನೇಶ್ವರಿ ತನ್ನ ಜಾಲದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ತೆಲುಗು ಹಾಗೂ ತಮಿಳು ಚಿತ್ರರಂಗದ ನಟಿಯರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಆದರೆ ಪೊಲೀಸರು ಇತರ ನಟಿಯರ ಹೆಸರುಗಳನ್ನು ಬಹಿರಂಗ ಪಡಿಸಿಲ್ಲ. ಹಾಗಾಗಿ ಪೊಲೀಸರು ಈಗಾಗಲೇ ಭುವನೇಶ್ವರಿ ಅರು ಬಹಿರಂಗಪಡಿಸಿದ ನಟಿಯರ ವಿವರ ಪಡೆಯುತ್ತಿದ್ದು, ಇನ್ನಷ್ಟು ಹೆಚ್ಚು ಬಂಧನವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭುವನೇಶ್ವರಿ ಅವರೇ ಪೊಲೀಸರಿಗೆ ಹೇಳಿರುವ ಪ್ರಕಾರ, ಕೇವಲ ಒಂದು ಗಂಟೆಯ ಸಮಯಕ್ಕೆ ಆಕೆ ಎರಡು ಲಕ್ಷ ರೂಪಾಯಿಗಳಿಂದ ಎಂಟು ಲಕ್ಷ ರೂಪಾಯಿಗಳವರೆಗೆ ದರ ನಿಗದಿ ಮಾಡುತ್ತಿದ್ದರು.
ಭುವನೇಶ್ವರಿ ಅವರ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆಕೆಗೆ ಬರುತ್ತಿದ್ದ ಕರೆಗಳನ್ನು ಟ್ರ್ಯಾಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಫೋನ್ನಲ್ಲಿದ್ದ ಮೆಮೊರಿಯನ್ನು ಬಳಸಿ ಆಕೆಯ ಜತೆಗೆ ಸಂಪರ್ಕದಲ್ಲಿದ್ದವರ ಹೆಸರು ಪತ್ತೆ ಮಾಡುತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆಯನ್ನು ತನ್ನ ನಟನೆಯ ಜತೆಗೆ ನಡೆಸಿಕೊಂಡು ಬರುತ್ತಿದ್ದ ಭುವನೇಶ್ವರಿ ಇದೇ ಕಾರಣಕ್ಕೆ 2002ರಲ್ಲೂ ಬಂಧಿತರಾಗಿ ಬಿಡುಗಡೆಯಾಗಿದ್ದರು. ಭುವನೇಶ್ವರಿ ಅವರ ಮನೆಯ ಸುತ್ತಮುತ್ತಲ ನಿವಾಸಿಗಳು ಆಕೆಯ ನಡವಳಿಕೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ ಕಾರಣ ಆಕೆಯ ಅಪಾರ್ಟ್ಮೆಂಟ್ ಮೇಲೆ ದಿಢೀರ್ ದಾಳಿ ನಡೆಸಿ ಭುವನೇಶ್ವರಿ ಅವರು ವೇಶ್ಯಾವಾಟಿಕೆ ನಡೆಸುತ್ತಿದ್ದುದು ಖಚಿತವಾಗಿ ಬಂಧಿಸಲಾಗಿದೆ.
ತಮಿಳು ಚಿತ್ರರಂಗದ ಖ್ಯಾತನಾಮರಾದ ಶಂಕರ್, ಭಾರತಿರಾಜ ಅವರ ಚಿತ್ರಗಳಲ್ಲಿ ಭುವನೇಶ್ವರಿ ನಟಿಸಿದ್ದಾರೆ. ತಮಿಳಿನ ಜನಪ್ರಿಯ 'ಬಾಯ್ಸ್' ಮತ್ತು 'ಥೇರ್ ಕತಿ ಪೆಣ್ಣು' ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸಿ ಭುವನೇಶ್ವರಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು.