ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪ್ಪಿಯ ಶ್ರೀಮತಿ: ಸಾವಿನ ದವಡೆಯಿಂದ ಎದ್ದು ಬಂದ ಸೆಲಿನಾ! (Shreemati | Celina Jaitley | Upendra | Ram Gopal Mishra | Maldives)
ಸುದ್ದಿ/ಗಾಸಿಪ್
Feedback Print Bookmark and Share
 
Celina Jaitley
IFM
ಬಾಲಿವುಡ್‌ನ ಹಾಟ್, ಸೆಕ್ಸೀ ಬೆಡಗಿ ಸೆಲಿನಾ ಜೇಟ್ಲಿ ಪ್ರಥಮ ಬಾರಿಗೆ ದಕ್ಷಿಣ ಭಾರತದ ಸಿನಿಮಾದತ್ತ ಕಣ್ಣು ಹಾಯಿಸಿ ಕನ್ನಡದಲ್ಲಿ ಶ್ರೀಮತಿ ಚಿತ್ರದಲ್ಲಿ ಉಪೇಂದ್ರ ಜತೆಗೆ ನಟಿಸುತ್ತಿರೋದು ಹಳೇ ಸುದ್ದಿ. ಆದರೆ ಅದೇ ಸೆಲಿನಾ ಜೇಟ್ಲಿ ಮೊನ್ನೆ ಮೊನ್ನೆ ಶ್ರೀಮತಿ ಚಿತ್ರದ ಶೂಟಿಂಗ್‌ನಲ್ಲಿ ಸಾವಿನಿಂದ ಪಾರಾಗಿ ಬದುಕಿ ಬಂದಿದ್ದಾಳೆ ಎಂಬುದು ಹೊಸ ರೋಚಕ ಸುದ್ದಿ.

ಹೌದು, ಸೆಲಿನಾ ಸಾವಿನ ದವಡೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿ ಜೀವಸಹಿತ ತಾಯ್ನಾಡಿಗೆ ಮರಳಿದ್ದಾಳೆ. ಅದೂ ಕೂಡಾ ಕನ್ನಡ ಸಿನಿಮಾದ ಶೂಟಿಂಗ್ ಸಂದರ್ಭ ಎಂಬುದಿಲ್ಲಿ ಗಮನಾರ್ಹ. ನಡೆದದ್ದೇನಪ್ಪಾ ಅಂದರೆ, ಸೆಲಿನಾ ಜೇಟ್ಲಿ ಶ್ರೀಮತಿ ಚಿತ್ರದ ಶೂಟಿಂಗ್‌ಗಾಗಿ ಉಪೇಂದ್ರ ಹಾಗೂ ತಂಡದ ಜತೆಗೆ ಮಾಲ್ಡೀವ್ಸ್‌ಗೆ ಹೋಗಿದ್ದರು. ಸ್ವತಃ ಸೆಲಿನಾರೇ ಹೇಳುವಂತೆ, ''ಅದೊಂದು ಎತ್ತರವಾದ ಪ್ರದೇಶ. ನಾವು ಎತ್ತರದ ಬಂಡೆಗಳಿದ್ದ ಪ್ರದೇಶದ ಮೇಲೆ ನಿಂತಿದ್ದೆವು. ಕೆಳಗಡೆ ಬಿದ್ದರೆ ಕಡಿದಾದ ಬಂಡೆಗಳಿರುವ ಸಮುದ್ರ ಪ್ರದೇಶವಿತ್ತು. ಅಂತಹ ಎತ್ತರದಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಕ್ಯಾಮರಾ ರೆಡಿಯಿತ್ತು. ನಾನು ಅಭಿನಯಿಸಲು ಬಂಡೆಯ ತುದಿಯಲ್ಲಿ ನಿಂತಿದ್ದೆ. ಇದ್ದಕ್ಕಿದ್ದಂತೆ ನನಗೆ ನ್ನನ ಮೇಲೆ ಹತೋಟಿ ಕಳೆದುಕೊಂಡಂತಾಗಿ ಹಿಮ್ಮುಖವಾಗಿ ಕೆಳಕ್ಕೆ ಬೀಳುವವಳಿದ್ದೆ. ಆ ಕ್ಷಣ ಏನಾಗುತ್ತಿದೆಯೆಂದೇ ನನಗೆ ಗೊತ್ತಾಗಲಿಲ್ಲ. ಅಷ್ಟರಲ್ಲಿ ಕ್ಯಾಮರಾ ಸಹಾಯಕ ರಾಮ್ ಗೋಪಾಲ್ ಮಿಶ್ರಾ ನನ್ನನ್ನು ಹಿಡಿದುಕೊಂಡರು. ಅವರು ನನ್ನನ್ನು ಹಿಡಿಯದಿದ್ದರೆ ನಾನು ಖಂಡಿತ ಬದುಕುಳಿಯುತ್ತಿರಲಿಲ್ಲ. ಕೆಳಗಿರುವ ಕಡಿದಾದ ಬಂಡೆಗಳಿರುವ ಸಮುದ್ರದ ಪ್ರಪಾತಕ್ಕೆ ಬೀಳುತ್ತಿದ್ದೆ. ಇದೆಲ್ಲ ಮಿಂಚಿನಂತೆ ಕ್ಷಣಾರ್ಧದಲ್ಲಿ ನಡೆದವು. ಯಾಕೋ ದೇವರು ದೊಡ್ಡವನು. ನಾನು ಬದುಕುಳಿದೆ'' ಎಂದು ತನಗಾದ ಭೀಕರ ಅನುಭವವನ್ನು ಬಿಚ್ಚಿಡುತ್ತಾರೆ ಸೆಲಿನಾ.

ಸೆಲಿನಾ ಈಗ ಮಾಲ್ಡೀವ್ಸ್‌ನಿಂದ ಮರಳಿದ್ದಾಳೆ. ತನಗಾದ ಈ ಅನುಭವವನ್ನು ಬಿಚ್ಚಿಡುವಾಗ ಸೆಲಿನಾಗೆ ಇನ್ನೂ ನಡುಕ ನಿಂತಂತಿಲ್ಲ. ಅಬ್ಬಾ ಎಂಥಾ ಅನುಭವ ಎಂದು ಭಯಮಿಶ್ರಿತ ದನಿಯಲ್ಲಿ ಆಕೆ ಹೇಳುತ್ತಾಳೆ. ಜತೆಗೆ ತನ್ನನ್ನು ಕಾಪಾಡಿದ ಮಿಶ್ರಾರನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೆಲಿನಾ ಜೇಟ್ಲಿ, ಬಾಲಿವುಡ್, ಶ್ರೀಮತಿ, ಮಾಲ್ಡೀವ್ಸ್, ಹಾಟ್