ಹಾಗೊಂದು ಪ್ರಶ್ನೆ ಅವರ ಅಭಿಮಾನಿಗಳನ್ನು ಹಾಗೂ ಉದ್ಯಮದ ಕೆಲ ಹಿತೈಷಿಗಳನ್ನು ಕಾಡುತ್ತಿದೆ. ಏಕೆಂದರೆ ಸಿಕ್ಸರ್ ಚಿತ್ರವನ್ನು ಬಿಟ್ಟರೆ ಅವರ ಯಾವ ಚಿತ್ರವೂ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿಲ್ಲ. ಹೀಗಾಗಿ ಈ ಚಿತ್ರದ ಯಶಸ್ಸಿನ ಮೇಲೆ ಅವರ ಮುಂದಿನ ಅಸ್ತಿತ್ವ ಮತ್ತು ಬೆಳವಣಿಗೆ ನಿಂತಿದೆ ಎನ್ನುತ್ತಾರೆ ಚಿತ್ರಪಂಡಿತರು.
ಇದಕ್ಕೂ ಮುಂಚೆ, ಮೆರವಣಿಗೆ, ಗೆಳೆಯ, ಗಂಗೆ ಬಾರೆ ತುಂಗೆ ಬಾರೆ ಚಿತ್ರಗಳಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದರೂ ಸಹ ಅವು ನಿರೀಕ್ಷೆಯನ್ನು ಮುಟ್ಟಿರಲಿಲ್ಲ. ಅದರಲ್ಲೂ ಗೆಳೆಯ ಚಿತ್ರವಂತೂ ಅವರಿಗೊಂದು ಹೊಸ ಫಾರ್ಮ್ ನೀಡಲಿದೆ ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಲೆಕ್ಕ ತಪ್ಪಿತು. ಆದ್ದರಿಂದ ಜೀವಾ ಚಿತ್ರದ ಕಡೆಗೇ ಎಲ್ಲರೂ ನೋಟ ಬೀರಿದ್ದಾರೆ.
ಈ ಹಿಂದೆ ಓ ಗುಲಾಬಿಯೇ, ಪಲ್ಲಕ್ಕಿ, ಯುವ ಇವೇ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದ ನಿರ್ಮಾಪಕರಾದ ಪರಮೇಶ್-ಪ್ರೇಮ್ ಕುಮಾರರವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತವಿದ್ದರೆ, ರವಿವರ್ಮರವರ ಸಾಹಸ ನಿರ್ದೇಶನವಿದೆ. ಜಯಣ್ಣ ಫಿಲಂಸ್ ಅವರು ಚಿತ್ರವನ್ನು ವಿತರಿಸುತ್ತಿದ್ದಾರೆ. ಚಿತ್ರದ ಪ್ರಚಾರ ಸಾಮಗ್ರಿಯನ್ನು ನೋಡಿದರೆ, ಈ ಚಿತ್ರದಲ್ಲೂ ಹೊಡೆದಾಟಕ್ಕೆ ಆದ್ಯತೆ ನೀಡಿರುವುದಾಗಿ ಕಾಣಿಸುತ್ತದೆ. ಪ್ರೇಕ್ಷಕ ಪ್ರಭು ಯಾವುದನ್ನು ಒಪ್ಪುತ್ತಾನೆ, ಯಾವುದನ್ನು ಬಿಡುತ್ತಾನೆ ಎಂದು ಹೇಳುವುದೇ ಕಷ್ಟವಾಗಿರುವುದರಿಂದ ಜೀವಾ ಚಿತ್ರದ ಬಿಡುಗಡೆಯವರೆಗೂ ಕಾಯಲೇಬೇಕು.