ಅಂಬಾರಿ ನಾಯಕಿ ಸುಪ್ರೀತಾ ಕಾಲಿಗೆ ಪೆಟ್ಟು ಮಾಡಿಕೊಂಡು 'ಕಾಲ್ಗೆಜ್ಜೆ'ಯಿಂದ ಹಿಂದೆ ಸರಿದಿದ್ದಾರೆ. ಹೌದು ಎ. ಬಂಗಾರು ನಿರ್ದೇಶನದ ಕಾಲ್ಗೆಜ್ಜೆ ಚಿತ್ರದಿಂದ ಅನಿವಾರ್ಯ ಕಾರಣದಿಂದಾಗಿ ಸುಪ್ರಿತಾ ಡ್ರಾಪ್ ಆಗಿದ್ದಾರೆ.
ಕೆಲವು ಮೂಲಗಳ ಪ್ರಕಾರ, ಸುಪ್ರಿತಾ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಹತೋಟಿ ತಪ್ಪಿ ಅಪಘಾತಕ್ಕೀಡಾಗಿದ್ದು, ಅವರು ಕಾಲು ಫ್ರಾಕ್ಚರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ವೈದ್ಯರು ಒಂದುವರೆ ತಿಂಗಳ ವಿಶ್ರಾಂತಿ ಪಡೆಯಲು ಸೂಚಿಸಿದ್ದರಿಂದ ನಿರ್ದೇಶಕ ಬಂಗಾರು ಆಕೆಯನ್ನು ಕೈಬಿಟ್ಟಿದ್ದಾರೆ.
MOKSHA
ಅವರ ಸ್ಥಾನಕ್ಕೆ ಈಗಾಗಲೇ ಆಯ್ಕೆಯೂ ನಡೆದಿದೆ. ಇದು ಚೆಲುವಿನ ಚಿಲಿಪಿಲಿಯ ಚೆಲುವೆ ರೂಪಿಕಾ ಪಾಲಾಗಿದೆ. ಚಿತ್ರೀಕರಣ ಇದೇ 15ರಿಂದ ಪ್ರಾರಂಭಗೊಳ್ಳಲಿದೆ. ಚಿತ್ರಕ್ಕೆ ಜಾಲಿಡೇಸ್, ಪೆರೋಲ್ ನಾಯಕ ವಿಶ್ವಾಸ ಆಯ್ಕೆಯಾಗಿದ್ದಾರೆ.
ಅಂದ ಹಾಗೆ ಸುಪ್ರೀತಾ ಅನಾರೋಗ್ಯದಿಂದಾಗಿ ಅವರ ಅಭಿನಯಿಸುತ್ತಿರುವ ಇನ್ನೆರಡು ಚಿತ್ರಕ್ಕೂ ಸಮಸ್ಯೆಗಳಾಗಿವೆ. ಸಂಕಲನಕಾರ ಸುರೇಶ್ ಅರಸ್ ಅವರ ಪೆರೋಲ್ ಹಾಗೂ ರಿಚರ್ಡ್ ಕ್ಯಾಸ್ಟಲಿನೋ ಅವರ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ ಚಿತ್ರಗಳು ಸ್ಥಗಿತಗೊಂಡಿವೆ. ಏನಿದ್ದರೂ ಸುಪ್ರೀತಾ ಸುಧಾರಿಸಿಕೊಳ್ಳುವವರೆಗೆ ಕಾಯುವುದಂತೂ ಅನಿವಾರ್ಯ.