ಪೂಜಾಗಾಂಧಿ ತಪ್ಪು ಮಾಡಿದ್ದಾರಂತೆ. ಹಾಗಂತ ಬೇರಾರೂ ಹೇಳಿಲ್ಲ. ಖುದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಕಳೆದ ವಾರ ಬಿಡುಗಡೆಯಾದ ‘ಹುಚ್ಚಿ’ ಚಿತ್ರದಲ್ಲಿ ನಟಿಸಿ ತಪ್ಪು ಮಾಡಿದ್ದೇನೆ ಎಂದು ತಡವಾಗಿ ಹೇಳಿಕೊಂಡಿದ್ದಾರೆ.
ಮೊದಲಿಗೆ ಚಿತ್ರದ ಕತೆ ಕೇಳಿದಾಗ ಇದು ಇಂಗ್ಲಿಷ್ನ ದಿ ಬ್ಯೂಟಿಫುಲ್ ಮೈಂಡ್ ಚಿತ್ರವನ್ನು ನೆನಪಿಸುತ್ತದೆ ಎಂದು ಅನಿಸಿತ್ತಂತೆ. ಆದರೆ ಕೊನೆಯಲ್ಲಿ ಎಲ್ಲೋ ಎಡವಿದ್ದೇನೆ ಎಂದು ಅನಿಸಿತ್ತಂತೆ. ಚಿತ್ರ ನನಗೆ ಖುಷಿ ಕೊಡಲಿಲ್ಲ. ಫ್ಲಾಶ್ ಬ್ಯಾಕ್ ದೃಶ್ಯಗಳನ್ನು ಸೇರಿದಂತೆ ಇಡೀ ಚಿತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸೆರೆಹಿಡಿಯಬಹುದಿತ್ತು ಎನ್ನುವುದು ಅವರ ಅಂಬೋಣ.
ಅದೆಲ್ಲಾ ಹಾಗಿರಲಿ. ಚಿತ್ರ ನೋಡಿದಾಗಲೇ ಏನೋ ತಪ್ಪಾಗಿದೆ ಅನ್ನಿಸಿತ್ತು. ಆದರೆ ಈ ಬಗ್ಗೆ ಹೇಳಿದರೂ ಸರಿ ಮಾಡಲಿಲ್ಲ. ಇನ್ನು ಮುಂದೆ ಹುಷಾರಾಗಿರುತ್ತೀನಿ ಎನ್ನುತ್ತಾರೆ ಪೂಜಾ. ಈ ಹಿಂದೆ ರಾಜ್ ಚಿತ್ರದ ಕೆಲವು ದೃಶ್ಯಗಳ ವಿಚಾರವಾಗಿ ಕ್ಷಮೆ ಕೋರಿದ್ದರು. ಇದೀಗ ಪೂಜಾ ಚಿತ್ರದಲ್ಲಿ ನಟಿಸಿದ್ದೇ ತಪ್ಪು ಎನ್ನುವ ಮೂಲಕ ಹೊಸ ರಾಗ ಹಾಡಿದ್ದಾರೆ.