ಹಾಸ್ಯ ನಟ ಕೋಮಲ್‍ಗೆ ಈಗ ಸೂಪರ್ ಸ್ಟಾರ್ ರಜನೀಕಾಂತ್ ಜೊತೆಗೆ ನಟಿಸುವ ಅವಕಾಶ ಪಡೆಯುವುದರಲ್ಲಿದ್ದಾರೆ! ಹೀಗೆ ಹೇಳಿದ್ದು ಬೇರಾರೂ ಅಲ್ಲ ಸ್ವತಃ ಕೋಮಲ್.
ಕನ್ನಡದ ಆಪ್ತರಕ್ಷಕ ಚಿತ್ರದಲ್ಲಿ ನಟಿಸಿರುವ ಕೋಮಲ್‌ಗೆ ತಮಿಳಿನಲ್ಲಿ ಅದೇ ಚಿತ್ರದ ರಿಮೇಕ್ ಮಾಡಿ, ಅದರಲ್ಲಿಯೂ ಅಭಿನಯಿಸುವ ಅವಕಾಶ ನೀಡುವುದಾಗಿ ನಿರ್ದೇಶಕ ವಾಸು ಹೇಳಿದ್ದಾರಂತೆ. ಅದೃಷ್ಟವಶಾತ್ ಆಪ್ತರಕ್ಷಕ ತಮಿಳಿನಲ್ಲಿ ರಿಮೇಕ್ ಆದರೆ, ಅದಕ್ಕೆ ರಜನೀಕಾಂತ್ ನಾಯಕ. ಇಲ್ಲಿ ವಿಷ್ಣು ಜೊತೆ ನಟಿಸಿದ್ದ ಕೋಮಲ್ ಆ ಚಿತ್ರದಲ್ಲೂ ರಜನೀಕಾಂತ್ ಜೊತೆಗೆ ಇರುತ್ತಾರಂತೆ. ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಲ್ಲೆ. ಮುಂದೆ ಎನಾಗುತ್ತೋ ಗೊತ್ತಿಲ್ಲ ಎನ್ನುತ್ತಾರೆ ಕೋಮಲ್.
WD
ಕೋಮಲ್‌ಗೆ ಈಗಂತೂ ಅವಕಾಶಗಳಿಗೆ ಕೊರತೆಯೇ ಇಲ್ಲ. ಈ ವರ್ಷ ಮೂರು ಸಿನಿಮಾಗಳಿಗೆ ಕಮಿಟ್ ಆಗಿದ್ದೇನೆ ಎನ್ನುವ ಕೋಮಲ್, ಅಶೋಕ್ ಕಶ್ಯಪ್ ಅವರ ಚಿತ್ರ 'ಅಪ್ಪು ಪಪ್ಪು' ಹಾಗೂ ಗುರುಪ್ರಸಾದ್ ಅವರ ಹೆಸರಿಡದ ಚಿತ್ರದ್ಲಲೂ ಅಭಿನಯಿಸುತ್ತಿದ್ದಾರೆ. ಗುರುಪ್ರಸಾದ್ ಕೋಮಲ್ ಅವರಿಗಾಗಿಯೇ ಕಥೆಯೊಂದನ್ನು ಸಿದ್ದಪಡಿಸುತ್ತಿದ್ದಾರೆ. ಅವರ ಚಿತ್ರದಲ್ಲಿ ನನ್ನ ಡೇಟ್ಸ್ ನೋಡಿಕೊಂಡು ನಟಿಸುತ್ತೇನೆ ಅನ್ನುತ್ತಾರೆ ಕೋಮಲ್.
ಅಂದಹಾಗೆ, ಕೋಮಲ್ ಅವರಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರಂತೆ. ಕೆಲವರು ಹೀರೋ ಆಗಿ ಎಂದರೆ ಮತ್ತೆ ಕೆಲವರು ಹಾಸ್ಯ ನಟನೆ ಬಿಡಬೇಡಿ ಎನ್ನುತ್ತಾರಂತೆ.