ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬಿಸಿಲಲ್ಲಿ ಕಪ್ಪಾಗಿ ಬಿಟ್ಟ ನಮ್ಮ ದಿಗಂತ್ ಎಂಬ ದೂದ್‌ಪೇಡ! (Bisile | Digant | Doodpeda | Emran)
ಸುದ್ದಿ/ಗಾಸಿಪ್
Feedback Print Bookmark and Share
 
Digant
MOKSHA
ಬೆಳ್ಳಗಿರೋದೆಲ್ಲ ಹಾಲಲ್ಲ ಅಂದಿದ್ದಾರೆ ಹಿರಿಯರು. ಅದು ನೂರರಷ್ಟು ಸತ್ಯ ಕೂಡಾ. ಅದೇನೇ ಇರಲಿ, ನಮ್ಮ ಕನ್ನಡದ ಸದ್ಯದ ಮನಸಾರೆ ಹೀರೋ ಗುಳಿಕೆನ್ನೆಯ ದಿಗಂತ್ ದೂದ್‌ಪೇಡ ಎಂದೇ ಖ್ಯಾತನಾಮರು. ಬಹುಶಃ ದೂದ್‌ಪೇಡದಂತೆ ಬೆಳ್ಳಬೆಳ್ಳಗೆ ಮುದ್ದು ಮುದ್ದಾಗಿ ಇರೋದ್ರಿಂದಲೋ ಏನೋ, ದಿಗಂತ್‌ಗೆ ದೂದ್‌ಪೇಡ ಎಂಬ ಅನ್ವರ್ಥ ನಾಮವಿದೆ. ದೂದ್‌ಪೇಡ ಕಪ್ಪಾಗಿಬಿಟ್ಟರೆ ಅದನ್ನು ಯಾರಾದರೂ ದೂದ್‌ಪೇಡ ಎನ್ನುತ್ತಾರೆಯೇ... ಖಂಡಿತಾ ಇಲ್ಲ ತಾನೇ? ಆದರೆ ನಮ್ಮ ಕನ್ನಡದ 'ದೂದ್‌ಪೇಡ' ದಿಗಂತ್ ಯಾಕೋ ಬಿಸಿಲಲ್ಲಿ ಕಪ್ಪಾಗಿದ್ದಾರಂತೆ..!

ಹೌದು. ದಿಗಂತ್ ಕಪ್ಪಾಗಿದ್ದಾರೆ. ಥೇಟ್ ನೀಗ್ರೋ ಥರ. ಇದ್ದಿಲಿನ ಹೊಳಪಿನ ಕಪ್ಪಾದ ಮೈಬಣ್ಣ. ಅಷ್ಟೂ ಕಪ್ಪು ಹೇಗಾದರಪ್ಪ ಅಂತೀರಾ? ವಿಷಯ ತುಂಬಾ ಸಿಂಪಲ್ಲು. ದಿಗಂತ್ ಬಿಸಿಲೇ ಎಂಬ ಚಿತ್ರದಲ್ಲಿ ಸದ್ಯ ನಟಿಸುತ್ತಿದ್ದಾರೆ. ಬಿಸಿಲೇ ಚಿತ್ರದ ಹಾಡೊಂದರಲ್ಲಿ ದಿಗಂತ್ ಅವರನ್ನು ಕೊರಿಯೋಗ್ರಾಫರ್ ಇಮ್ರಾನ್ ಆಫ್ರಿಕಾ ಮೂಲದ ಅಮೆರಿಕನ್ನರಂತೆ ಕಪ್ಪಾಗಿ ಹಾಗೂ ಥೇಟ್ ಬಿಳಿ ಚರ್ಮದ ಅಮೆರಿಕನ್ನರಂತೆ ಬೆಳ್ಳಗೆ ತೋರಿಸಿದ್ದಾರಂತೆ. ದಿಗಂತ್ ಅವರನ್ನು ಬೆಳ್ಳಗೆ ಮಾಡಲು ಕಷ್ಟವೇನಿಲ್ಲ. ಅವರಿಗೆ ಅಂಥಾ ಮೇಕಪ್ ಅಗತ್ಯವೂ ಇಲ್ಲ. ಕೆಂಪುಕೆಂಪಾಗಿಯೇ ಬೆಳ್ಳಗಿದ್ದಾರೆ. ಆದರೆ ಕಪ್ಪಾಗಿ ಮಾಡೋದು ಅಷ್ಟು ಸುಲಭವಲ್ಲ. ಮೇಕಪ್‌ಮ್ಯಾ್‌ಗೆ ಬರೋಬ್ಬರಿ ಎರಡು ಗಂಟೆ ಹಿಡಿಯಿತಂತೆ ಕಪ್ಪಾಗಿಸಲು!

ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಎರಡೂ ಇರುವುದರಿಂದ ದಿಗಂತ್ ಅವರನ್ನು ಡಿಫರೆಂಟ್ ಲುಕ್‌ನಲ್ಲಿ ತೋರಿಸಲು ಇಮ್ರಾನ್ ಈ ಪ್ರಯತ್ನ ಮಾಡಿದ್ದಾರಂತೆ. ವಿಶೇಷವಾಗಿ ನೃತ್ಯ ಸಂಯೋಜನೆ ಮಾಡಬೇಕೆಂದು ಇಮ್ರಾನ್ ಹಾಡಿನಲ್ಲಿ ನಟ ದಿಗಂತ್ ಗೆ ಎರಡು ಲುಕ್ ನೀಡಿದ್ದಾರೆ. ಹಾಡಿನಲ್ಲಿ ಬಳಸಿಕೊಂಡ ಲೇಸರ್ ಬೆಳಕು ಕೂಡಾ ವಿಶೇಷವಂತೆ. ಘಜಿನಿ, ಶಿವಾಜಿ ಖ್ಯಾತಿಯ ಆಂಥೊನಿ ಈ ಹಾಡನ್ನು ಸಂಕಲನ ಮಾಡುತ್ತಿರುವುದು ಚಿತ್ರದ ಇನ್ನೊಂದು ವಿಶೇಷ.

ಇಂದು ಬಹುತೇಕ ಕನ್ನಡದ ಸಿನಿಮಾಗಳಿಗೆ ಸೋಲೇ ಗತಿ ಎಂದು ಅನಾಯಾಸವಾಗಿ ಪ್ರೇಕ್ಷಕ ನಿರ್ಣಯಿಸಿಬಿಡುವಷ್ಟರ ಮಟ್ಟಿಗೆ ಸಿನಿಮಾ ರಂಗ ತಲುಪಿದೆ. ಇತ್ತೀಚೆಗಿನ ಚಿತ್ರಗಳೆಡೆಗೆ ಗಮನ ಹರಿಸಿದಾಗ, ಬಹಳಷ್ಟು ಚಿತ್ರಗಳು ಸೋತರೂ ಹಾಡುಗಳು ಗೆದ್ದಿರುವ ಉದಾಹರಣೆಗಳಿವೆ. ಒಟ್ಟಾರೆ ಮುಂಗಾರು ಮಳೆಯ ನಂತರ ಚಿತ್ರದ ಹಾಡಿನ ಬಗ್ಗೆ ಸ್ವಲ್ಪ ಒತ್ತುಕೊಡುವ ಪ್ರವೃತ್ತಿ ಬೆಳೆದುಬಿಟ್ಟಿದೆ ಎಂದರೂ ತಪ್ಪಾಗಲಾರದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಸಿಲೇ, ದೂದ್ಪೇಡ, ದಿಗಂತ್, ಇಮ್ರಾನ್