ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೊಸಬರ 'ಯಾರೇ ನೀ ದೇವತೆ' (Yare Nee Devathe | Nagendra Aras | Kumar | Sangeetha)
ಸುದ್ದಿ/ಗಾಸಿಪ್
Feedback Print Bookmark and Share
 
'ಯಾರೇ ನೀ ದೇವತೆ' ಸಂಪೂರ್ಣ ಹೊಸಬರ ಚಿತ್ರ. ಹೀಗಾಗಿ ಈ ಚಿತ್ರವನ್ನು ತುಂಬಾ ಕಷ್ಟಪಟ್ಟು ಮಾಡಿದ್ದೇವೆ ಎಂಬುದು ಸ್ವತಃ ನಿರ್ಮಾಪಕರು ಹಾಗೂ ನಿರ್ದೇಶಕರ ಮಾತು. ಇದು ನಾಗೇಂದ್ರ ಅರಸ್ ನಿರ್ದೇಶನದ ಮೂರನೇ ಚಿತ್ರ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ಡಿಗೆ ಕುಮಾರ್ ಮತ್ತು ಸಂಗೀತ ಎಂಬ ನವ ನಟ ನಟಿಯ ಆಗಮನವಾಗಿದೆ.

ಚಂದ್ರಕಲಾ ಬೆಟ್ಟಸ್ವಾಮಿ ಮತ್ತು ದೊರೆಸ್ವಾಮಿ ಇಬ್ಬರೂ ಸೇರಿ ಸಿನಿಮಾ ನಿರ್ಮಿಸಿ, ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಹೊಸಬರನ್ನು ಹಾಕಿಕೊಂಡು ಕೆಲಸ ಮಾಡುವುದು ಕಷ್ಟಕರ ಎಂದು ನಾಗೇಂದ್ರ ಅಂದುಕೊಂಡಿದ್ದರಂತೆ. ಆದರ ಡಬ್ಬಿಂಗ್ ವೇಳೆ ಹಾಗನ್ನಿಸಲಿಲ್ಲವಂತೆ. ಈ ಚಿತ್ರದ ಜೀವಾಳ ಸಂಗೀತ ಅನ್ನುವ ಅರಸ್, ವೆಂಕಟ್ - ನಾರಾಯಣ್ ಜೋಡಿ ಇಲ್ಲಿ ಹೊಸ ರೀತಿಯ ಹಾಡುಗಳನ್ನು ನೀಡಿದ್ದಾರೆ ಎನ್ನುತ್ತಾರೆ.

ಎಲ್ಲಾ ಚಿತ್ರಗಳಂತೆ ಇದೂ ಕೂಡ ಲವ್ ಸ್ಟೋರಿನೇ. ಆದರೆ, ಚಿತ್ರ ನೋಡಿದ ಬಳಿಕ ಲವ್ ಸ್ಟೋರಿಯನ್ನು ಹೀಗೂ ಹೇಳಬಹುದಾ ಎಂದು ಪ್ರೇಕ್ಷಕರಿಗೆ ಖಂಡಿತಾ ಅನಿಸುತ್ತೆ ಅಂತ ಸ್ವತಃ ಅವರೇ ಭವಿಷ್ಯ ನುಡಿಯುತ್ತಾರೆ. ಚಿತ್ರದ ಬಗೆಗೆ ಹೆಚ್ಚು ಮಾಹಿತಿ ನೀಡದ ಅರಸ್, ತೆರೆಯ ಹಿಂದೆ ಯಾರ‌್ಯಾರು ಕೆಲಸ ಮಾಡುತ್ತಾರೊ ಅವರನ್ನು ತೆರೆ ಮುಂದೆ ತೋರಿಸುವ ಪ್ರಯತ್ನ ಮಾಡಿದ್ದೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಾರೇ ನೀ ದೇವತೆ, ನಾಗೇಂದ್ರ ಅರಸ್, ಕುಮಾರ್ ಸಂಗೀತ