ನಿರ್ದೇಶಕ ಬಿ.ರಾಂಪ್ರಕಾಶ್ ಈಗ ಕೈಗೆತ್ತಿಕೊಂಡಿರುವ ಚಿತ್ರ ಶಿವಕಾಶಿ. ಅನಂತ್ ನಾಗ್, ಲಕ್ಷ್ಮಿ ಅವರಂತಹ ಹಿರಿಯ ತಾರೆಗಳೊಂದಿಗೆ ಎಳೆಯ ತಾರೆಗಳಾದ ಮಾನಸಿ ಮತ್ತು ಅಜಿತ್ ಹಾಗೂ ಯೋಗೀಶ್ ವೀರ ನಟಿಸುತ್ತಿದ್ದಾರೆ.
ಕಾವೇರಿ ಜಲವಿವಾದದ ಕತೆಗೆ ಪ್ರೀತಿಯ ಲೇಪನ ಬೆರೆಸಿ ಕತೆ ರಚಿಸಿರುವ ರಾಂಪ್ರಕಾಶ್ 'ಕಳೆದು ಹೋದ ಮೇಲೆ ಚಿಂತಿಸಿ ಫಲವೇನು?' ಎಂಬ ತತ್ವವನ್ನು ಜನತೆಗೆ ಸಾರುತ್ತಿದ್ದಾರಂತೆ. 'ಹರಿದು ಹೋದ ನೀರು ಮರೆತು ಹೋತು ಪ್ರೇಮ ಮತ್ತೆ ಬರದು' ಅನ್ನುವುದು ಶಿವಕಾಶಿಯಲ್ಲಿನ ಪಂಚಿಂಗ್ ಲೈನ್!
ಈಗಾಗಲೇ ಶೇಕಡಾ 70 ಭಾಗ ಚಿತ್ರೀಕರಣ ಮುಗಿದಿದೆ. ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರ ಮುಂತಾದ ಕಡೆಗಳಲ್ಲಿ ಶಿವಕಾಶಿಯನ್ನು ಚಿತ್ರಿಕರಿಸಲಾಗಿದೆ. ಇದಕ್ಕೆ ಗಂಧರ್ವ ಸಂಗೀತ ನೀಡಿದ್ದಾರೆ. ಕೆ.ಸತೀಶ್ ಅವರ ಕ್ಯಾಮರ ಕೈಚಳಕವಿದ್ದರೆ, ಅಲ್ಟಿಮೇಟ್ ಶಿವು ಸಾಹಸ ಹಾಗೂ ಮಹದೇವಯ್ಯ ನಿರ್ಮಾಪಕರಾಗಿದ್ದಾರೆ. ಹಾಸ್ಯ ನಟ ಶರಣ್ ಮತ್ತು ಅವರ ತಂದೆ ತಾಯಿ ಪ್ರಥಮ ಬಾರಿಗೆ ಈ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.