ಪುಟಾಣಿ ಚುರುಕು ಕಣ್ಣು , ಮುಗ್ಧ ಮುದ್ದು ಮುಗುಳ್ನಗೆ, ಕೆನ್ನೆಗುಂಟ ಚಾಚಿ ಮುದ್ದಿಸುತ್ತಲೇ ಇರುವ ಹಠಮಾರಿ ಕೂದಲು, ಹೇಳಿಕೊಳ್ಳುವಂತಹ ಎತ್ತರದ ನಿಲುವಿಲ್ಲದಿದ್ದರೂ ದೊಡ್ಡ ಕನಸು, ಪ್ರೌಢ ಮಾತು ಇವಿಷ್ಟ್ನೆಲ್ಲ ಹದವಾಗಿ ಬೆರೆಸಿದಂತಿರುವ ಹುಡುಗಿ ಹರ್ಷಿಕಾ ಪೂಣಚ್ಚ.
'ಪಿಯೂಸಿ' ಚಿತ್ರದ ಮುಲಕ ಚಿತ್ರರಂಗಕ್ಕೆ ಇಳಿದ ಹರ್ಷಿಕಾ ಕೊಡಗಿನ ಬೆಡಗಿ. ಕೊಂಕಣಿ, ತೆಲುಗು ಹಾಗೂ ಕೊಡವ ಭಾಷೆಗಳಲ್ಲಿ ನಟಿಸಿದ ಅನುಭವವಿರುವ ಹರ್ಷಿಕಾ ಪಧವಿದರೆ ಕೂಡಾ. ಕನ್ನಡದಲ್ಲಿ 'ಜುಗಾರಿ' ಆದ ನಂತರ 'ಯೋಗಿ' ಚಿತ್ರದಲ್ಲಿ ಅತಿಥಿ ಪಾತ್ರ ಸಿಕ್ಕಿತು. ಈಗ 'ಸೈಕಲ್' ಚಿತ್ರದ ನಾಯಕಿಯಾಗುವ ಯೋಗ ಒಲಿದಿದೆ.
ನಾನು ತುಂಬಾ ಚಿತ್ರದಲ್ಲಿ ನಟಿಸಬೇಕು. ಒಳ್ಳೆಯ ನಟಿಯಾಗಬೇಕು. ಕನ್ನಡದಲ್ಲೂ ಉತ್ತಮ ನಟಿಯರಿದ್ದಾರೆ ಅನ್ನೋದನ್ನು ನಾನು ಸಾಬೀತು ಪಡಿಸಬೇಕೆಂದಿರುವೆ. ಇದು ನನ್ನ ಸಣ್ಣ ಆಸೆ ಅನ್ನುತ್ತಾರೆ ಹರ್ಷಿಕಾ. ಓದಿನ ಸಮಯದಲ್ಲಿ ಮಾತ್ರ ಯಾರಿಗೂ ಕಾಲ್‌ಶೀಟ್ ಕೊಡುವುದಿಲ್ಲ. ನನ್ನ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡುತ್ತೇನೆ ಎನ್ನುತ್ತಾರೆ ಹರ್ಷಿಕಾ.