ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪೋಷಕ ನಟರಿಲ್ಲದೆ, ನಾಯಕ ನಟರಿಲ್ಲ- ಹಂಸಲೇಖ (Hamsalekha | Jugaari | Avinash | Narasimharaju)
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
''ನಾಯಕ ನಟರಿದ್ದರೇನೇ ಚಿತ್ರ ಅಲ್ಲ. ಗೆಳೆಯ, ಅಕ್ಕ- ತಂಗಿ, ಅಪ್ಪ- ಅಮ್ಮ ಎಂಬೆಲ್ಲ ಪೋಷಕ ಪಾತ್ರಗಳಿಲ್ಲದೆ ನಾಯಕನಿಲ್ಲ. ಕಲೆಯನ್ನು ಬೆಳೆಸೊ ಕೆಲಸ ನಾಯಕ ನಟರಿಂದ ಸಾದ್ಯವಿಲ್ಲ. ಸಹ ಕಲಾವಿದರಿಲ್ಲದೆ ಹೀರೂಗಳಿಲ್ಲ ಎಂಬುದು ಮಾತ್ರ ಯಾವೊಬ್ಬ ನಟನಿಗೂ ಅರ್ಥವಾಗುತ್ತಿಲ್ಲ.'' ಹೀಗೆ ಆರೋಪ, ಅಸಹನೆ ವ್ಯಕ್ತಪಡಿಸಿದವರು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ.

ಇತ್ತೀಚೆಗೆ ಮಲ್ಲೇಶ್ವರಂನ ಜಿ.ಎಂ ರಿಜಾಯ್ಸ್‌ನಲ್ಲಿ ಜುಗಾರಿ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ ಪ್ರಸ್ತುತ ಸಿನಿಮಾ ರಂಗದ ಪರಿಸ್ಥಿತಿ ಅವಲೋಕಿಸಿದ ಹಂಸಲೇಖ ತಮ್ಮ ಮನದಲ್ಲಿದ್ದ ಬೇಸರವನ್ನು ಹೊರಹಾಕಿದರು.

ಇದೇ ಸಂದರ್ಭ, ಹಾಸ್ಯ ಚಕ್ರವರ್ತಿ ನರಸಿಂಹರಾಜು ಕುಟುಂಬದ ಕುಡಿಯೊಂದು ನಾಯಕನಾಗುತ್ತಿರುವುದು ಖುಷಿ ತಂದಿದೆ ಎಂದ ಅವರು 'ನೀನು ಕೇವಲ ಕಲಾವಿದನಾಗು. ಆದರೆ ಹೀರೊ ಆಗಬೇಡ' ಎಂದು ನರಸಿಂಹರಾಜು ಕುಟುಂಬದ ಕುಡಿ ಅವಿನಾಶ್‌ಗೆ ಹಂಸಲೇಖ ಕಿವಿಮಾತು ಹೇಳಿದರು.

ಜುಗಾರಿ ಚಿತ್ರದಲ್ಲಿ ಐದು ಹಾಡುಗಳಿದ್ದು ಅದರಲ್ಲಿ ಒಂದು ಹಾಡನ್ನು ತಾವೇ ಬರೆದಿರುವುದಾಗಿ ಚಿತ್ರದ ನಿರ್ದೇಶಕ ಎಸ್.ಡಿ. ಅರವಿಂದ್ ತಿಳಿಸಿದರು. ಇದೇ ಸಮಾರಂಭದಲ್ಲಿ ಹಿರಿಯ ರಂಗ ಕಲಾವಿದರಾದ ರೇಣುಕಾ ಪ್ರಸಾದ್, ಶನಿ ಮಹಾದೇವಪ್ಪ, ರತ್ನಾಕರ್ ಮುಂತಾದವರನ್ನು ಸನ್ಮಾನಿಸಲಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಂಸಲೇಖಾ, ಜುಗಾರಿ, ಅವಿನಾಶ್, ನರಸಿಂಹರಾಜು