ನಟ ವಿಜಯ್ ರಾಘವೇಂದ್ರ ರಾಧೆಯೊಂದಿಗೆ ಸ್ಟೆಪ್ ಹಾಕಲು ತಯಾರಾಗುತ್ತಿದ್ದಾರೆಂಬ ಸುದ್ದಿ ಗಾಂಧಿನಗರದಿಂದ ಕೇಳಿಬರುತ್ತಿದೆ. ಹಾಗಂತ ವಿಜಯ ರಾಘವೇಂದ್ರರಿಗೆ ಹೊಸ ರಾಧೆ ಸಿಕ್ಕಿದ್ದಾಳೆ ಎಂದು ಅಂದುಕೊಳ್ಳಬೇಡಿ. ವಿಷಯ ತುಂಬಾ ಸಿಂಪಲ್ಲು. ವಿಜಯ ರಾಘವೇಂದ್ರ ರಾಧ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ನಮ್ಮ ಬಸವ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದ ಹರಿಕಿರಣ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಜಯಪ್ರಕಾಶ್ ರೆಡ್ಡಿ, ರಂಗಾಯಣ ರಘು, ಭವ್ಯ, ಅನುಷಾ ಮತ್ತಿತರರು ಚಿತ್ರದ ಪ್ರಮುಖ ಕಲಾವಿದರಾಗಿ ಆಯ್ಕೆಯಾಗಿದ್ದಾರೆ. ಆಂಧ್ರ ಹಾಗೂ ಕರ್ನಾಟಕದ ಚಿಕ್ಕಮಗಳೂರು, ಬೆಂಗಳೂರು ಹೀಗೆ ಮೂರು ಹಂತಗಳಲ್ಲಿ ನಡೆಯುವ ಚಿತ್ರೀಕರಣಕ್ಕೆ ಸತ್ತಿ ಬಾಬು ಛಾಯಾಗ್ರಹಣವಿದೆ.
ಅಂದ ಹಾಗೆ ಈ ರಾಧನಿಗೆ ರಾಧೆ ಸಿಕ್ಕಿಲ್ಲ. ನಾಯಕಿಗೆ ಇನ್ನೂ ತಲಾಶ್ ಮಾಡಲಾಗುತ್ತಿದೆ. ಈ ಚಿತ್ರ ನಿರ್ಮಾಣದ ಇರಾದೆ ಇಟ್ಟುಕೊಂಡವರು ಆಂಧ್ರ ಮೂಲದ ಜಿ. ರವಿಕಮಲ್ ಮತ್ತು ಜಿ.ಶ್ರೀಧರ್.