ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಣ್ಣನ ನಿರ್ದೇಶನದಲ್ಲಿ ತಮ್ಮ ದರ್ಶನ್ ನಾಯಕ! (Darshan Thugudeep | Navagraha | KCN Chandrashekhar)
ಸುದ್ದಿ/ಗಾಸಿಪ್
Feedback Print Bookmark and Share
 
Darshan Thugudeep
MOKSHA
'ನವಗ್ರಹ' ಚಿತ್ರದ ನಂತರ ತೂಗುದೀಪ ಸಹೋದರರು ಇದೀಗ ಮತ್ತೊಮ್ಮೆ ಒಂದಾಗಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅಣ್ಣ ನಿರ್ದೇಶಕನಾದರೆ, ತಮ್ಮನಾದ ದರ್ಶನ್ ನಾಯಕನಾಗಿ ಪಾತ್ರ ನಿರ್ವಹಿಸಲಿದ್ದಾರೆ. ಇಲ್ಲಿಯವರೆಗೆ ದರ್ಶನ್ ಅಭಿನಯದ ಚಿತ್ರಗಳಿಗೆ ಸಂಗೀತ ನೀಡಿ ಸೈ ಎನಿಸಿಕೊಂಡಿರುವ ವಿ.ಹರಿಕೃಷ್ಣ ಈ ಚಿತ್ರಕ್ಕೂ ರಾಗ ಸಂಯೋಜನೆ ಮಾಡಲಿದ್ದಾರೆ.

ಕೆ.ಕೃಷ್ಣ ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. ಈ ಹಿಂದೆ ಕೆ.ಸಿ.ಎನ್. ಚಂದ್ರಶೇಖರ್ ನಿರ್ಮಾಣದ 'ಭೂಪತಿ' ಚಿತ್ರದಲ್ಲಿ ಅಭಿನಯಿಸಿದ್ದ ದರ್ಶನ್, ಈಗ ಮತ್ತೆ ಅವರದ್ದೇ ನಿರ್ಮಾಣದ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ.

ಅಂದಹಾಗೆ, ಈ ಹಿಂದೆ 'ಸರ್ವಾಂತರ್ಯಾಮಿ' ಎಂಬ ಚಿತ್ರ ಇದೇ ತಂಡದಿಂದ ಬರಬೇಕಿತ್ತು. ಆದರೆ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಚಿಂತನ್ ಎಂಬವರು ದಿನಕರ್ ಜೊತೆಗೆ ಸೇರಿ ಈ ಚಿತ್ರಕ್ಕೆ ಕಥೆ ಬರೆದಿದ್ದಾರಂತೆ. ಯಾವಾಗಲೂ ಚಿತ್ರ ಸೆಟ್ಟೇರಿದ ನಂತರವೇ ದರ್ಶನ್ ಗೆ ನಾಯಕಿ ಹುಡುಕಾಟ ನಡೆಯುತ್ತದೆ. ಅದು ಇಲ್ಲೂ ಯಥಾ ಪ್ರಕಾರ ನಡೆಯಲಿದೆ ಎಂದು ವಿವರಿಸಿ ಹೇಳಬೇಕಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದರ್ಶನ್ ತೂಗುದೀಪ್, ನವಗ್ರಹ, ಕೆಸಿಎನ್ ಚಂದ್ರಶೇಖರ್