ಬಾಲ್ಯದ ನೆನಪುಗಳನ್ನು ಯಾರಂದಲೂ ಮರೆಯಲು ಸಾದ್ಯವಿಲ್ಲ. ಅದಕ್ಕೆ ಅದರದ್ದೇ ಆದ ಬೆಚ್ಚಗಿನ ನೆನಪಿದೆ. ಹಾಗಾಗಿ ದೊಡ್ಡವರಾದ ಮೇಲೆ ಎಂಥಾ ಹುದ್ದೆಯನ್ನೇರಿದರೂ ಬಾಲ್ಯದ ನೆನಪು, ಘಟನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ.
ರವಿಚಂದ್ರನ್ ಅವರ 'ಹೂ' ಚಿತ್ರ ಕೂಡಾ ಹಾಗೆಯೇ ಅಂತೆ. ಹೂ ಚಿತ್ರದ ನಾಯಕ ಬಾಲ್ಯದಲ್ಲಿ ನಾಯಕಿಯೊಂದಿಗೆ ಹಾಡೊಂದನ್ನು ಹಾಡಿರುತ್ತಾನೆ ಅದೇ ಹಾಡು ಕೊನೆಯಲ್ಲಿ ಅವರಿಬ್ಬರನ್ನು ಒಂದು ಮಾಡುತ್ತದೆ. ಇದು ಹೂ ಚಿತ್ರದ ಕಥೆಯ ಎಳೆ.
WD
ಯಾವುದೋ ಕಾರಣಕ್ಕೆ ಗೆಳತಿ ನಾಯಕನಿಂದ ದೂರಾಗಿರುತ್ತಾಳೆ. ಕೊನೆಗೊಂದು ದಿನ ನಾಯಕ ಬೇಸರಿಸಿ ಊರು ಬಿಡಲು ನಿರ್ಧರಿಸಿ ರೈಲು ನಿಲ್ದಾಣಕ್ಕೆ ಆಗಮಿಸುತ್ತಾನೆ. ಅಷ್ಟರಲ್ಲಿ ಸತ್ಯಾಂಶ ಅರಿವ ಗೆಳತಿ ನಿಲ್ದಾಣಕ್ಕೆ ಆಗಮಿಸಿ ಬಾಲ್ಯದ ಗೀತೆಯನ್ನು ಹಾಡಿದಾಗ ಎಲ್ಲವೂ ಸರಿಹೋಗುತ್ತದೆ. ಪ್ರೇಮಿಗಳು ಒಂದಾಗುತ್ತಾರೆ. ಹೂ ಚಿತ್ರದ ಇಂತಹ ದೃಶ್ಯವಿರುವ ಕ್ಲೈಮ್ಯಾಕ್ಸನ್ನು ಮೈಸೂರಿನ ರೇಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ಚಿತ್ರೀಕರಿಸಲಾಯಿತು.
ರವಿಚಂದ್ರನ್, ಪ್ರಕಾಶ್ ರಾಜ್, ಮೀರಾ ಜಾಸ್ಮಿನ್ ಹಾಗೂ ನಮಿತಾ ಚಿತ್ರೀಕರಣದ ವೇಳೆ ಭಾಗವಹಿಸಿದ್ದರು. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ರವಿಚಂದ್ರನ್ ಹೊತ್ತಿದ್ದಾರೆ. ಇ.ಎಸ್.ವಿ ಸೀತಾರಾಂ ಅವರ ಛಾಯಾಗ್ರಹಣ ಇರುವ ಈ ಚಿತ್ರದಲ್ಲಿ ಆರು ಹಾಡುಗಳಿವೆ. ಈ ಗೀತೆಗಳಿಗೆ ವಿ.ಹರಿಕೃಷ್ಣ ಅವರ ಸಂಗೀತವಿದೆ. ರಂಗಾಯಣ ರಘು, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಹಾಗೂ ಶರಣ್ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ.