ಎ.ಕೆ 56 ಚಿತ್ರದ ನಾಯಕಿ ನಿಕಿತಾ ಹೊಸ ಹುಡುಗನಿಗೆ ತುಟಿಗೆ ತುಟಿ ಸೇರಿಸಿ ಮುತ್ತು ಕೋಡೋದಿಲ್ಲ ಎಂದು ಹೇಳೋ ಮೂಲಕ ಆ ಚಿತ್ರದಿಂದ ಹೊರಬಿದ್ದದ್ದು ಎಲ್ಲರಿಗೂ ಗೊತ್ತು. ಈಗ ಆಸ್ಥಾನಕ್ಕೆ ಶಿರಿನ್ ಆಗಮಿಸುವ ಮೂಲಕ ನಿಕಿತಾಳ ಖಾಲಿ ಜಾಗವನ್ನು ಭರ್ತಿ ಮಾಡಿದ್ದಾರೆ.
ನಟನೆಯಲ್ಲಿ ಮುತ್ತು ಕೊಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಶಿರಿನ್, 'ಐ ಡೊಂಟ್ ಮೈಂಡ್ ಟು ಕಿಸ್ ಆನ್ ಸ್ಕ್ರೀನ್' ಎಂದಿದ್ದಾರೆ. ಎ.ಕೆ 56 ಭಾರೀ ಮೊತ್ತದ ಹಣ ಹೂಡಿರುವ ಚಿತ್ರ. ಅಲ್ಲದೆ, ಓಂ ಪ್ರಕಾಶ್ ರಾವ್ ದೊಡ್ಡ ನಿರ್ದೇಶಕ. ಅವರ ನಿರ್ದೇಶನದಲ್ಲಿ ನಟಿಸಬೇಕೆಂಬುದು ನನ್ನ ಆಸೆಯಾಗಿತ್ತು, ಅದೀಗ ಈಡೇರಿತು ಎನ್ನುತ್ತಾರೆ ಶಿರಿನ್.
ನಿಮ್ಮ ವಾಸ ಮುಂಬೈ. ಕನ್ನಡದವರ ಕೈಗೆ ಸಿಗೋಲ್ಲ ಎಂಬ ಮಾತಿದೆ, ನಿಜವೇ...? ಎಂದರೆ ಈ ಶಿರಿನ್ ಅಷ್ಟೇ ನಯವಾಗಿ, ದಯವಿಟ್ಟು ತಪ್ಪು ತಿಳಿಯಬೇಡಿ, ನಾನು ಎಂದೂ ಯಾರ ಸಂಪರ್ಕವನ್ನೂ ಕಡಿದು ಕೊಂಡಿಲ್ಲ. ಸ್ವಲ್ಪ ದಿನ ರಾಜಸ್ಥಾನದಲ್ಲಿದ್ದೆ . ಈಗ ನೋಡಿ ಬೆಂಗಳೂರಿನಲ್ಲೆ ಇದ್ದೇನೆ ಎಂದು ನಗು ಚೆಲ್ಲುತ್ತಾರೆ.
ದರ್ಶನ್ ಜೊತೆ ಭೂಪತಿ ಚಿತ್ರದಲ್ಲಿ ನಟಿಸುವುದರ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಸದ್ಯ ಯೋಗೀಶರೊಂದಿಗಿನ ಯೋಗಿ ಚಿತ್ರ ಅವರ ಕೈ ಹಿಡಿದಿದೆ. ಎ.ಕೆ.56 ಚಿತ್ರ ಶಿರಿನ್ ಅವರನ್ನು ಸ್ಯಾಂಡಲ್‌ವುಡ್‌ನಲ್ಲಿ ಮುನ್ನಡೆಸುತ್ತದಾ ಕಾದು ನೋಡಬೇಕು.