ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೋಲ್ಕತಾ ಚಿತ್ರೋತ್ಸವದಲ್ಲಿ ಬರಗೂರರ 'ಉಗ್ರಗಾಮಿ' (Baraguru Ramachandrappa | Ugragami | Swathantrapura)
ಸುದ್ದಿ/ಗಾಸಿಪ್
Feedback Print Bookmark and Share
 
Baraguru Ramachandrappa
MOKSHA
ಕನ್ನಡದ ಸೂಕ್ಷ್ಮ ಸಂವೇದಿ ನಿರ್ದೇಶಕರೆಂದೇ ಖ್ಯಾತರಾಗಿರುವ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ ಉಗ್ರಗಾಮಿ ಕನ್ನಡ ಚಲನಚಿತ್ರ ಕೋಲ್ಕತಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ನವೆಂಬರ್ ಮೂರನೇ ವಾರ ಕೋಲ್ಕತಾದಲ್ಲಿ ನಡೆಯುವ ಈ ಚಿತ್ರೋತ್ಸವ ಅಂತಾರಾಷ್ಟ್ರೀಯ ಚಿತ್ರ ನಿರ್ಮಾಣ ಸಂಸ್ಥೆಗಳ ಒಕ್ಕೂಟದಿಂದ ಮನ್ನಣೆ ಪಡೆದ ಅಧಿಕೃತ ಚಿತ್ರೋತ್ಸವವಾಗಿದ್ದು, 'ಉಗ್ರಗಾಮಿ' ಕನ್ನಡ ಚಿತ್ರರಂಗದಿಂದ ಆಯ್ಕೆಯಾಗಿ ಪ್ರದರ್ಶನವಾಗುತ್ತಿರುವ ಮೊದಲ ಕನ್ನಡ ಚಿತ್ರವೆನಿಸಿದೆ.

Neetu
MOKSHA
ಉಗ್ರಗಾಮಿ ಚಿತ್ರ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಗೃಹಸಚಿವರನ್ನು ಕೊಲ್ಲುವ ಪ್ರಯತ್ನ ಮಾಡಿದ ಆರೋಪದ ಮೇಲೆ ಪೊಲೀಸರು ಉಗ್ರಗಾಮಿಯನ್ನು ಬೆನ್ನಟ್ಟುತ್ತಾರೆ. ಆತ ಸ್ವತಂತ್ರಪುರವೆಂಬ ಹಳ್ಳಿಯನ್ನು ಪ್ರವೇಶಿಸುತ್ತಾನೆ. ಕತ್ತಲು ಆವರಿಸಿದ್ದ ವೇಳೆಯಲ್ಲಿ ಆ ಹಳ್ಳಿಯ ಮುಂದಾಳುವಿನ ಮನೆಗೆ ನುಗ್ಗುತ್ತಾನೆ. ಅಂದೇ ಮನೆಯಲ್ಲಿ ಮಗಳ ಪ್ರಥಮ ರಾತ್ರಿಯಾಗಿರುತ್ತದೆ. ಉಗ್ರಗಾಮಿಯ ಪ್ರವೇಶದಿಂದ ಮನೆ ವಾತಾವರಣ ಕದಡುತ್ತದೆ.ಮನೆಯ ಹೊರಗೆ ಪೊಲೀಸರು ಶೋಧ ಮಾಡುತ್ತಿರುತ್ತಾರೆ. ಹೀಗೆ ಅಂತರಂಗ-ಬಹಿರಂಗಗಳ ನೆಲೆಯಲ್ಲಿ ಹಿಂಸೆಯ ಆಯಾಮಗಳನ್ನು ಅನಾವರಣಗೊಳಿಸುವ ಪ್ರಯತ್ನವೇ ಉಗ್ರಗಾಮಿ ಎಂಬುದು ಬರಗೂರು ಅವರ ವಿವರಣೆ.

ಬರಗೂರು ರಾಮಚಂದ್ರಪ್ಪನವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರ ಅವರದೇ ಆದ 'ಸ್ವತಂತ್ರ ಪುರ' ಎನ್ನುವ ಕಥೆಯನ್ನು ಆಧರಿಸಿದೆ. ಹುಳಿಮಾವು ರಾಮಚಂದ್ರ ನಿರ್ಮಿಸಿದ ಈ ಚಿತ್ರಕ್ಕೆ ಎಲ್ಲಾ ವಾದ್ಯಗಳನ್ನು ತಾವೇ ಏಕಾಂಗಿಯಾಗಿ ನುಡಿಸುವ ಮೂಲಕ ಪ್ರವೀಣ್ ಗೋಡ್ಕಿಂಡಿ ಸಂಗೀತ ನಿರ್ದೇಶನ ಮಾಡಿರುವುದು ವಿಶೇಷವಾಗಿದೆ. ಕಿಶೋರ್, ನೀತು ನಾಯಕ ನಾಯಕಿಯಾಗಿದ್ದಾರೆ. ಸುರೇಶ್ ಅರಸು ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬರಗೂರು ರಾಮಚಂದ್ರಪ್ಪ, ಉಗ್ರಗಾಮಿ, ಸ್ವತಂತ್ರಪುರ