ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೂಪರ್ ಮ್ಯಾನ್ ವೇಷದಲ್ಲಿ ಬರಲಿರುವ ಪುನೀತ್! (Appu | Puneet | Krrish | Ready | K Madesh | Raam)
ಸುದ್ದಿ/ಗಾಸಿಪ್
Feedback Print Bookmark and Share
 
Hrithik Roshan in Krrish
IFM
'ರಾಜ್' ಚಿತ್ರದಲ್ಲಿ ಹಾಲಿವುಡ್ಡಿನ ಜಾಕ್ ಸ್ಪೇರೋ ಥರ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ಪುನೀತ್ ಈ ಬಾರಿ ತಮ್ಮ ಇನ್ನೊಂದು ವೇಷದಲ್ಲಿ ವಿನೂತನವಾಗಿ ಅಭಿಮಾನಿಗಳ ಹುಚ್ಚೆಬ್ಬಿಸಲಿದ್ದಾರೆ. ಅದು ಸೂಪರ್ ಮ್ಯಾನ್ ವೇಷಯದಲ್ಲಿ ಮುಖಕ್ಕೆ ಮುಖವಾಡ ಧರಿಸಿ!!!

ಹೌದು. ಸದ್ಯದಲ್ಲೇ ಹೊರಬರಲಿರುವ ಪುನೀತ್ ಅಭಿನಯದ ಚಿತ್ರ 'ರಾಮ್‌'ನಲ್ಲಿ ಪುನೀತ್ ಸೂಪರ್ ಮ್ಯಾನ್ ಮಾದರಿಯ ವೇಷದಲ್ಲಿ ಕಾಣಿಸಲಿದ್ದಾರಂತೆ. ಅಂದು ಹಿಂದಿಯಲ್ಲಿ ಹೃತಿಕ್ ರೋಷನ್ ಅಭಿನಯದಲ್ಲಿ ಕ್ರಿಶ್ ಸಿನಿಮಾ ಬಂದಿತ್ತಲ್ಲ, ಅದರಲ್ಲಿ ಹೃತಿಕ್ ಧರಿಸಿದ್ದರಲ್ಲ, ಅಥದ್ದೇ ಮಾದರಿಯ ಕಪ್ಪು ಮುಖವಾಡವೂ ಹೊಂದಿದ ಪೂರ್ತಿ ಮುಚ್ಚಿದ ಕಪ್ಪು ಬಟ್ಟೆಯಲ್ಲಿ ಪುನೀತ್ ಕಾಣಿಸಲಿದ್ದಾರೆ. ಕಣ್ಣು, ಬಾಯಿ ಹೊರತು ಪಡಿಸಿ ಕಣ್ಣಿನ ಸುತ್ತ ಧರಿಸುವ ಕಪ್ಪು ಮುಖವಾಡವಿದು.
MOKSHA


ರಾಮ್ ಚಿತ್ರ ತೆಲುಗಿನ ರೆಡಿ ಚಿತ್ರದ ರಿಮೇಕ್. ಆದರೆ ನಿರ್ದೇಶಕ ಮಾದೇಶ್ ಹೇಳುವಂತೆ, ತೆಲುಗಿನಲ್ಲಿ ನಟರ ವಸ್ತ್ರವಿನ್ಯಾಸಕ್ಕೆ ಹೆಚ್ಚಿನ ಗಮನ ನೀಡಿರಲಿಲ್ಲ. ಆದರೆ ಕನ್ನಡದಲ್ಲಿ ವಸ್ತ್ರವಿನ್ಯಾಸಕ್ಕೆ ವಿಶೇಷ ಮಹತ್ವ ನೀಡಿದ್ದೇನೆ. ಅಲ್ಲದೆ ಪುನೀತ್ ಅವರ ಇಮೇಜಿಹಗೆ ಹೊಂದುವಂಥ ವಸ್ತ್ರವನ್ನು ವೈವಿಧ್ಯಮಯವಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಅದಕ್ಕಾಗಿ ಮುಂಬೈಯಿಂದ ಪುನೀತ್‌ಗಾಗಿಯೇ ಒಬ್ಬ ವಸ್ತ್ರವಿನ್ಯಾಸಕರನ್ನು ಕರೆತರಿಸಲಾಗಿದೆ ಎನ್ನುತ್ತಾರೆ.

ಹೃತಿಕ್ ರೋಷನ್ ಅಭಿನಯದ ಕ್ರಿಶ್ ಚಿತ್ರದಲ್ಲಿ ಹೃತಿಕ್ ರೋಷನ್ ಇಂಥದ್ದೇ ಸೂಪರ್‌ಮ್ಯಾನ್ ವೇಷದಲ್ಲಿ ಬಂದಿದ್ದರು. ರಾಮ್ ಚಿತ್ರದಲ್ಲೂ ಪುನೀತ್‌ಗೆ ಬಹುತೇಕ ಅಂಥದ್ದೇ ವಸ್ತ್ರವಿನ್ಯಾಸ ಎಂದು ವಿವರಿಸುತ್ತಾರೆ ಮಾದೇಶ್.

ತನ್ನ ವಿಶೇಷ ವಸ್ತ್ರವಿನ್ಯಾಸದ ಬಗ್ಗೆ ಮಾತನಾಡಿದ ಪುನೀತ್, ರಾಮ್ ಚಿತ್ರದಲ್ಲಿ ನಾನು ಸೂಪರ್ ಮ್ಯಾನ್ ದಿರಿಸಿನ್ಲಲಿ ಬರುತ್ತಿರೋದು ನಿಜ. ಆದರೆ ಅದು, ತುಂಬ ಹೊತ್ತು ಇಲ್ಲ. ಒಂದು ಸಣ್ಣ ದೃಶ್ಯದಲ್ಲಿ ಬಂದು ಹೋಗುತ್ತೇನೆ ಅಷ್ಟೆ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುನೀತ್, ರಾಮ್, ಸೂಪರ್ ಮ್ಯಾನ್, ಕ್ರಿಶ್, ಮಾದೇಶ್