ಮುಂಗಾರು ಮಳೆಯ ಯಶಸ್ಸಿನಲ್ಲಿ ತೇಲಿಹೋದ ಯೋಗರಾಜ ಭಟ್ ಎಂಬ ಕನ್ನಡ ಪ್ರತಿಭಾವಂತ ನಿರ್ದೇಶಕ ಸದ್ಯಕ್ಕೀಕ ಮನಸಾರೆಯ ಯಶಸ್ಸಿನಲ್ಲಿ ಮನಸಾರೆ ಮಿಂದಿದ್ದಾರೆ. ಮಿಂದು ಬಹುಬೇಗ ಮೈಕೊಡವಿ ಎದ್ದಿದ್ದಾರೆ ಕೂಡಾ. ಈ ಬಾರಿ ಚಿತ್ರಮಂದಿರಗಳಲ್ಲಿ ಮನಸಾರೆ ಓಡುತ್ತಿರುವಾಗಲೇ ಬಹುಬೇಗನೆ ಮತ್ತೊಂದು ಚಿತ್ರದ ತಯಾರಿ ಸದ್ದಿಲ್ಲದೆ ಮುಗಿಸಿ ಶೂಟಿಂಗಿಗೂ ರೆಡಿಯಾಗಿದ್ದಾರೆ!
ಹೌದು. ಈ ಬಾರಿಯ ಸಿನಿಮಾಕ್ಕೆ ಭಟ್ಟರೇ ನಿರ್ದೇಶಕರು, ಭಟ್ಟರೇ ನಿರ್ಮಾಪಕರು ಕೂಡಾ. ತಮ್ಮದೇ ಬ್ಯಾನರಿನಡಿ ಭಟ್ಟರು ಹೊಸ ಚಿತ್ರ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ನಿರ್ಮಾಣಕ್ಕೆ ಗೆಳೆಯ ಸುಬ್ರಹ್ಮಣ್ಯರ ಸಹಕಾರವೂ ಇದೆ.
MOKSHA
ಎಂದಿನಂತೆ ಭಟ್ಟರು ನಾಯಕನಿಗಾಗಿ ಮತ್ತೆ ಹುಡುಕಾಡಿಲ್ಲ. ತನಮ್ಮಿಷ್ಟದ ದಿಗಂತನ್ನೇ ಹಾಕಿಕೊಂಡಿದ್ದಾರೆ. ಯಾಕೆ ಪದೇಪದೇ ದಿಗಂತ್ ಅವರನ್ನೇ ಹಾಕಿಕೊಳ್ಳುತ್ತೀರಿ ಎಂದರೆ, ದಿಗಂತ್ ನನ್ನ ಮೆಚ್ಚಿನ ನಟ. ಅವನು ನನ್ನನ್ನು ತುಂಬ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ನನ್ನ ನಿರ್ದೇಶನದ ಸ್ಟೈಲ್‌ಗೆ ಬಹುಬೇಗನೆ ಹೊಂದಿಕೊಳ್ಳುತ್ತಾನೆ. ಆತ ನಾನ್‌ಸೆನ್ಸ್ ನಟ ಅಲ್ಲ. ನಾವಿಬ್ಬರೂ ಈಗ ಉತ್ತಮ ಗೆಳೆಯರೂ ಆಗಿದ್ದೇವೆ. ನನಗಾತ ತುಂಬ ಇಷ್ಟ ಎನ್ನುತ್ತಾರೆ ಯೋಗರಾಜ್ ಭಟ್. ನಾಯಕಿ ನಟಿಯಾಗಿ ಹರಿಪ್ರಿಯಾರನ್ನು ಆಯ್ಕೆ ಮಾಡಿದ್ದೇವೆ. ಹರಿಪ್ರಿಯಾ ಕನ್ನಡದ ಚೆಂದದ ಹುಡುಗಿ. ಯುವ ನಟಿಯರಲ್ಲಿ ಅಪೀಲಿಂಗ್ ಮೊಗ ಹೊಂದಿರುವ ನಟಿ ಆಕೆ. ಅಲ್ಲದೆ, ಆಕೆ ಕನ್ನಡತಿ ಆಗಿರೋದ್ರಿಂತ ನನ್ನ ಕೆಲಸ ಸುಲಭ ಕೂಡಾ ಎನ್ನುತ್ತಾರೆ ಭಟ್ಟರು.
ಈ ಬಾರಿಯ ಚಿತ್ರದ ಕಥೆಯೇನು ಎಂದರೆ, ಯೋಗರಾಜ ಭಟ್ಟರು, ಇದೊಂದು ಸದ್ಯದ ಯುವ ಜನಾಂಗದ ನಾಡಿಮಿಡಿತ. ಹಾಗಾಗಿ ತುಂಬ ಫ್ರೆಶ್ ಲುಕ್ ಇರುವ ಯುವ ನಾಯಕ ನಾಯಕಿಯರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎನ್ನುತ್ತಾರೆ ಭಟ್ಟರು.
MOKSHA
ಡಿಸೆಂಬರ್ 6ರಿಂದ ಶೂಟಿಂಗ್ ಆರಂಭ. ಚಿತ್ರಕ್ಕೆ ಕ್ಯಾಲೆಂಡರ್ ಎಂಬ ಹೆಸರಿಡುವ ಯೋಚನೆಯಿದ್ದರೂ ಈ ಹೆಸರೇ ಅಂತಿಮ ಅಲ್ಲ ಎನ್ನುತ್ತಾರೆ ಭಟ್ಟರು. ಚಿತ್ರದ ಶೂಟಿಂಗ್ ಚಿತ್ರದುರ್ಗ, ಹಿರಿಯೂರು ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ.
ಅಂದಹಾಗೆ ಮನಸಾರೆ ಚಿತ್ರ ಯೋಗರಾಜ್ ಭಟ್ಟರ ಪ್ರಕಾರ ಸೂಪರ್ ಹಿಟ್. 24 ಕೇಂದ್ರಗಳಲ್ಲಿ 50 ದಿನ ಓಡಿರುವ ಈ ಚಿತ್ರ ಹಲವು ಕೇಂದ್ರಗಳಲ್ಲಿ ಸೆಂಚುರಿ ಬಾರಿಸುವುದು ಗ್ಯಾರಂಟಿ ಎಂಬ ಆತ್ಮವಿಶ್ವಾಸ ಭಟ್ಟರದು. ದಿಗಂತ್ ಮನಸಾರೆಯ ಮೂಲಕ ತಾನು ಅತ್ಯುತ್ತಮವಾಗಿ ನಟಿಸಬಲ್ಲೆ ಎಂದು ತೋರಿಸಿಕೊಟ್ಟ. ಆತನೊಬ್ಬ ಉತ್ತಮ ನಟ. ಅಲ್ಲದೆ, ಈಗಾಗಲೇ ಆತ ಸ್ಟಾರ್ ನಟನೂ ಆಗಿ ಬಿಟ್ಟಿದ್ದಾನೆ ಎಂಬುದು ಭಟ್ಟರ ಅಭಿಮತ.
ದಿಗಂತ್‌ರನ್ನೇ ಹಿಡಿದಿರುವ ಯೋಗರಾಜ್ ಭಟ್, ಯಾವಾಗ ದಿಗಂತ್ ಸ್ಟಾರ್‌ಗಿರಿ ಹೆಚ್ಚಾಗಿ ಆತ ನನ್ನ ಕೈಗೆ ಸಿಗಲ್ಲ ಅಂತಾಗುತ್ತಾನೋ, ನಂತರ ಮುಂದೆ ನನ್ನ ಚಿತ್ರಗಳಿಗೆ ಹೊಸ ಮುಖಕ್ಕೆ ಹುಡುಕಾಟ ನಡೆಸುತ್ತೇನೆ. ಅಲ್ಲಿವರೆಗೆ ದಿಗಂತ್ ನನ್ನೊಂದಿಗಿದ್ದಾನೆ ಎನ್ನುತ್ತಾರೆ ಯೋಗರಾಜ್ ಭಟ್.