ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನೀತುವಿನ ನೀತಿ ಪಾಠ (Neethu | Shabari | Gaalipata | Ugragami)
ಸುದ್ದಿ/ಗಾಸಿಪ್
Feedback Print Bookmark and Share
 
MOKSHA
ಗಾಳಿಪಟ ಚಿತ್ರದಲ್ಲಿ ಗಯ್ಯಾಳಿಯಂತೆ ವಿಶಿಷ್ಟವಾಗಿ ಅಭಿನಯಿಸಿ ಪ್ರೇಕ್ಷಕ ಪ್ರಭುಗಳ ಮನ ಗೆದ್ದಿದ್ದ ನಟಿ ನೀತು, ಇದೀಗ ಸಂಭಾವನೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರಂತೆ. ಇದೇ ವಿಚಾರದಲ್ಲಿ ತಕರಾರು ಮಾಡಿಕೊಂಡು, ರಮೇಶ್ ಯಾದವ್ ನಿರ್ಮಾಣದ ಶಬರಿ ಚಿತ್ರದ ಸಹವಾಸವೇ ಬೇಡ ಎಂದು ಅವರು ಕೈ ತೊಳೆದುಕೊಂಡು ಬಿಟ್ಟರಂತೆ.

ಈ ಮೊದಲು ಸಂಭಾವನೆಗಿಂತ ಸಿಗುವ ಪಾತ್ರವೇ ಮುಖ್ಯ ಎನ್ನುತ್ತಿದ್ದ ನೀತು, ಅತಿ ಕಡಿಮೆ ಕಾಸು ತೆಗೆದುಕೊಂಡು ತುಳು ಭಾಷೆಯ ಕೋಟಿ ಚನ್ನಯ್ಯ ಚಿತ್ರದಲ್ಲಿ ನಟಿಸಿ ಪ್ರಶಸ್ತಿಯನ್ನೂ ಮಡಲಿಗೆ ಹಾಕಿಕೊಂಡಿದ್ದರಂತೆ. ಅದೇ ರೀತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಉಗ್ರಗಾಮಿ ಚಿತ್ರದಲ್ಲೂ ಸಹ ಅವರಿಗೆ ಜನರು ಗುರುತಿಸುವಂತಹ ಪಾತ್ರ ದೊರಕಿದ್ದು, ಕಡಿಮೆ ದುಡ್ಡು ಪಡೆದು ಸೊಗಸಾಗಿ ನಟಿಸಿದ್ದೇನೆ ಎಂದು ಅವರು ತಮ್ಮ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾರೆ.

ಅವಕಾಶಗಳು ಇಲ್ಲವೆಂದು ನೀತುಗೆ ನಿಜವಾಗಿಯೂ ಬೇಸರ ಇಲ್ಲವಂತೆ. ಆದರೆ ಅದನ್ನೇ ಜನ ಪದೇ ಪದೇ ಆಡಿಕೊಳ್ಳುತ್ತಾರೆ ಎಂಬುದು ದುಃಖದ ಸಂಗತಿ ಅವರಿಗೆ. ಅವರ ಅಭಿನಯದ ಕೃಷ್ಣ ನೀ ಲೇಟಾಗ್ ಬಾರೋ, ಐತಲಕಡಿ ತೆರೆಗೆ ಬರಬೇಕಿದ್ದು, ಉಳಿದಂತೆ ಬಂದ ಆಫರ್ ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲವಂತೆ. ಕಾರಣ, ಕಥೆ, ಪಾತ್ರ ಯಾವುದೂ ಅವರಿಗೆ ಸರಿಬರುತ್ತಿಲ್ಲ ಎಂಬುದು ಅವರ ದೂರು.

ಅದೆಲ್ಲಾ ಸರಿ, ಈ ನಡುವೆ ಯಾಕೋ ಸ್ವಲ್ಪ ದಡೂತಿಯಂತೆ ಕಾಣುತ್ತಿದ್ದೀರಲ್ಲಾ ಎಂದರೆ, ದಪ್ಪ ಆಗೋದು ಪರಿಸರದ ನಿಯಮ. ಏನೂ ಸಾಧ್ಯವಿಲ್ಲ ಎನ್ನುತ್ತಾ ನೀತು ನೀತಿ ಪಾಠ ಶುರು ಮಾಡ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೀತು, ಗಾಳಿಪಟ, ಉಗ್ರಗಾಮಿ, ಶಬರಿ