ಹಾಸ್ಯ ಲೋಕದ ದಿಗ್ಗಜ ಸಹೋದರರಾದ ಜಗ್ಗೇಶ್ ಮತ್ತು ಕೋಮಲ್ ತುಂಬಾ ದಿನಗಳ ನಂತರ ಜೊತೆಜೊತೆಯಾಗಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು 'ಲಿಫ್ಟ್ ಕೊಡ್ಲಾ?' 'ಸ್ವರ್ಗಕ್ಕೆ ಮೂರೇ ಗೇಣು' ಎಂಬುದು ಅದರ ಟ್ಯಾಗ್ ಲೈನ್. ಇದೇ 23ರಿಂದ ಚಿತ್ರೀಕರಣ ಆರಂಭಿಸಲಿದ್ದಾರೆ.
MOKSHA
ಅಲ್ಲಿಗೆ, 'ಮನ್ಮಥ' ಚಿತ್ರದ ನಂತರ ಈ ಕಾಮಿಡಿ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಲಿದೆ. ಸಿ.ಎಂ.ಆರ್. ಪ್ರೊಡಕ್ಷನ್ಸ್ ಶಂಕರ ರೆಡ್ಡಿ ನಿರ್ಮೆಸುತ್ತಿರುವ ಈ ಚಿತ್ರದ ಛಾಯಾಗ್ರಹಣ ಮತ್ತು ನಿರ್ದೇಶನ ಅಶೋಕ್ ಕಶ್ಯಪ್ ಅವರದ್ದು. ವಿ. ಮನೋಹರ್ ಸಂಗೀತ, ರಾಂ ನಾರಾಯಣ್ ಸಂಭಾಷಣೆ, ಉದಯರವಿ ಹೆಗಡೆ ಸಂಕಲನ, ಭಾವಾ ಕಲೆ, ಜಾಲಿ ಬಾಸ್ಟಿನ್ ಸಾಹಸ ಮತ್ತು ದೇವಾನಂದ್ ನೃತ್ಯ ಸಂಯೋಜನೆಯಿದೆ.
ರಾಜು ತಾಳೀಕೊಟೆ, ಸುದರ್ಶನ್, ಕಿಶೋರ್, ವಿ.ಮನೋಹರ್, ಬುಲೆಟ್ ಪ್ರಕಾಶ್, ಕಿಲ್ಲರ್ ವೆಂಕಟೇಶ್ ಮುಂತಾದವರು ತಾರಾಗಣದಲ್ಲಿದ್ದು, ನಾಯಕಿಯ ಹುಡುಕಾಟ ನಡೆಯುತ್ತಿದೆಯಂತೆ. 45 ದಿನಗಳಲ್ಲೇ ಶೂಟಿಂಗ್ ಮುಗಿಯಲಿದ್ದು, ಬೆಂಗಳೂರು, ಕೊಡಚಾದ್ರಿ, ಮಂಗಳೂರು ಮತ್ತು ಚಿಕ್ಕಮಗಳೂರು ಸುತ್ತಮುತ್ತಲ ಲೋಕೆಶನ್ ಗಳನ್ನು ಚಿತ್ರೀಕರಣಕ್ಕಾಗಿ ಆರಿಸಿಕೊಳ್ಳಲಾಗಿದೆ.