ಕೆ.ಸಿ.ಎನ್ ಚಂದ್ರಶೇಖರ್ ನಿರ್ಮಾಣದಲ್ಲಿ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಭಿನಯಿಸಲಿರುವ ಚಿತ್ರಕ್ಕೆ ಭಾರೀ ತಲೆ ಕೆಡಿಸಿಕೊಂಡು ಕೊನೆಗೂ 'ಸಾರಥಿ' ಎಂದು ಹೆಸರಿಡಲಾಗಿದೆ.
ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಇದೇ 19ರಿಂದ ಆರಂಭವಾಗಲಿದೆ. ನಿರ್ಮಾಪಕ ಕೆ.ಸಿ.ಎನ್. ಚಂದ್ರಶೇಖರ್ ಈ ಹಿಂದೆ ದರ್ಶನ್ ಅಭಿನಯದಲ್ಲಿ ನಿರ್ಮಿಸಿದ್ದ ಚಿತ್ರವೆಂದರೆ ಭೂಪತಿ. ಅದು ದರ್ಶನ್ ಅವರ 25ನೇ ಚಿತ್ರವಾಗಿತ್ತು. ಆಗ ಕೆ.ಸಿ.ಎನ್ ಅವರಿಗೆ ಮತ್ತೊಂದು ಚಿತ್ರ ಮಾಡಿಕೊಡುವುದಾಗಿ ಮಾತು ಕೊಟ್ಟಿದ್ದ ದರ್ಶನ್, ಎರಡು ವರ್ಷಗಳ ನಂತರ ಇದೀಗ ಕೆ.ಸಿ.ಎನ್‌ಗೆ ಲಭ್ಯವಾಗಿದ್ದಾರೆ.
ಉಳಿದಂತೆ ಸಾರಥಿಗೆ ವಿ.ಹರಿಕೃಷ್ಣ ಸಂಗೀತ, ಕೃಷ್ಣಕುಮಾರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿ ಸೇರಿದಂತೆ ಉಳಿದ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ