ಛಾಯಾಗ್ರಾಹಕರಾಗಿ ಚಿತ್ರರಂಗಕ್ಕೆ ಬಂದು ಪೂರ್ಣ ಪ್ರಮಾಣದ ಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಅಣಜಿ ನಾಗರಾಜ್ ಸಿನಿಮಾ ಫ್ಯಾಕ್ಟರಿ ಏನಾದರೂ ಶುರು ಮಾಡಿಕೊಂಡಿದ್ದಾರೆಯೇ? ಎಂಬ ಗುಮಾನಿಯ ಪ್ರಶ್ನೆಗೆ ಹೌದು ಎನ್ನುತ್ತವೆ ಗಾಂಧಿನಗರದ ಮೂಲಗಳು.
ಮೊನ್ನೆ ಮೊನ್ನೆಯಷ್ಟೆ ಸುಗ್ರೀವ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಅಣಜಿ ಕೈಯಲ್ಲಿ ನಿರ್ಮಾಣಗೊಂಡು ಈಗ ಬಿಡುಗಡೆಗೆ ಸಿದ್ದವಾಗಿರುವ ಚಿತ್ರಗಳು ನಾಲ್ಕು.
ಪ್ರಶಾಂತ್ ನಿರ್ದೇಶನದ ಸುಗ್ರೀವ, ಪ್ರೇಮ್ ಶಿಷ್ಯ ವಿಜಯ್ ನಿರ್ದೇಶನದ ಗುಬ್ಬಿ, ಪ್ರಮೋದ್ ಚಕ್ರವರ್ತಿಯ ಗೋಲ್ ಮಾಲ್ ಹಾಗೂ ಮತ್ತೊಂದು ಹೊಸ ಚಿತ್ರ ಜೋಕಾಲಿ ಇವುಗಳೆಲ್ಲವೂ ನಿರ್ಮಾಪಕ ಅಣಜಿ ಫ್ಯಾಕ್ಟರಿಯಿಂದ ಹೊರಬರುವ ಚಿತ್ರಗಳು.
ಇದಷ್ಟೆ ಅಲ್ಲದೆ ಇನ್ನೂ ಕೆಲವು ಚಿತ್ರಗಳು ಸದ್ಯದಲ್ಲೇ ಸೆಟ್ಟೇರುವ ಸೂಚನೆಗಳಿವೆ. ಅಲ್ಲಿಗೆ ಗಾಂಧಿನಗರದ ಮೂಲಗಳ ಪ್ರಕಾರ ಅಣಜಿ ನಾಗರಾಜ್ ಸಿನಿಮಾ ಕಾರ್ಖಾನೆ ಸ್ಥಾಪಿಸಿದ್ದಾರೆ ಎಂಬುದು ಖರೆ.