ಚಿತ್ರನಟಿಯೊಬ್ಬಳ ವೈಯಕ್ತಿಕ ಜೀವನ ಆಧರಿತ ಕಥಾ ಹಂದರವಿರುವ ಮಿನುಗು ಚಿತ್ರಕ್ಕೆ ಸೆನ್ಸಾರ್ ಓಕೆ ಎಂದಿದೆ. ಜಯವಂತ್ ನಿರ್ದೇಶನದ ಈ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇದು ನನ್ನ ವೃತ್ತಿ ಜೀವನದ ಬಹಳ ವಿಶೇಷವಾದ ಪಾತ್ರ. ನನ್ನ ರಿಯಲ್ ಲೈಫಿಗೆ ತುಂಬಾ ಹತ್ತಿರವಾದ ಪಾತ್ರ ಎನ್ನುವುದು ಪೂಜಾ ಅಭಿಪ್ರಾಯ. ಚಿತ್ರೀಕರಣ ಮುಗಿಸಿ, ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರವನ್ನು ಗಜೇಂದ್ರ ನಿರ್ಮಿಸಿದ್ದಾರೆ.
ಫುಲ್ ಪವರ್ ಗೋಪು ಸಂಗೀತ, ಸತೀಶ್ ಕುಮಾರ್ ಛಾಯಾಗ್ರಹಣ, ಸುನಿಲ್ ಕುಮಾರ್ ಸಿಂಗ್ ಸಂಭಾಷಣೆ, ಜಗದೀಶ್ ಗೀತ ರಚನೆ, ಅರವಿಂದ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಸುನಿಲ್ ರಾವ್, ಅಜಿತ್ ಹಂಡೆ, ಸಂಗೀತಾ ಶೆಟ್ಟಿ, ಗುರು ಹೆಗ್ಡೆ ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ.