ಯಾರಂತೆಯೂ ನಾನು ಬದುಕಲು ಇಷ್ಟಪಡುವುದಿಲ್ಲ. ನಾನು ನನ್ನದೇ ಆದ ಐಡೆಂಟಿಟಿ ಪಡೆದುಕೊಳ್ಳಬೇಕೆಂದಿರುವೆ ಎಂದು ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ ಸ್ವಾಭಿಮಾನದಿಂದ ಹೇಳಿಕೊಳ್ಳುತ್ತಾರೆ.
ಹರ್ಷಿಕಾಗೆ ಇದೀಗ ಶಿವಣ್ಣನ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ತಮಸ್ಸು ಚಿತ್ರದಲ್ಲಿ ಎರಡು ನಾಯಕಿಯರ ಪೈಕಿ ಒಬ್ಬಾಕೆಯ ಪಾತ್ರ ಗಿಟ್ಟಿಸಿಕೊಂಡಿರುವ ಅವರು ತಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ಸಾಗಿದ್ದಾರಂತೆ.
ಪೋಷಕರು ಬಯಸಿದಂತೆ, ಮೊದಲು ನಾನು ಎಂಜಿನಿಯರ್ ಆಗಬೇಕು ನಂತರ ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಅವರು ತಮ್ಮ ಜೀವನದ ಗುರಿಗಳ ಬಗ್ಗೆ ವಿವರಿಸುತ್ತಾರೆ.
ಪಿಯುಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹರ್ಷಿಕಾಗೆ ಬ್ರೇಕ್ ನೀಡುವಂತಹ ಚಿತ್ರಗಳು ಸಿಗಲೇ ಇಲ್ಲ. ಆದರೂ ಹೊರ ರಾಜ್ಯದಿಂದ ಆಫರ್‌ಗಳು ಅವರಿಗೆ ಬರಲಾರಂಭಿಸಿವೆಯಂತೆ.
ಮುದ್ದಾಗಿ ಕಾಣಲು ಗ್ಲಾಮರ್ ಮೊರೆ ಹೋಗುತ್ತೇನೆ. ಆದರೆ ಎಕ್ಸ್‌ಪೋಸ್ ವಿಷಯಕ್ಕೆ ಬಂದರೆ ನಾನು ಅದರಿಂದ ದೂರ ಎನ್ನುತ್ತಾರೆ. ಎಲ್ಲೇ ಹೋದರೂ ಜನರು ತನ್ನನ್ನು ಗುರುತಿಸುವ ಪಾತ್ರವೊಂದರಲ್ಲಿ ನಟಿಸಬೇಕೆಂಬುದು ಹರ್ಷಿಕಾರ ಮಹದಾಸೆಯಂತೆ.